ಪಿಂಚಣಿ ಪ್ರಾರಂಭಿಸಲು ಸರ್ಕರಿ ನೌಕರರು ಬ್ಯಾಂಕ್ ಗೆ ತೆರಳಬೇಕಿಲ್ಲ: ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರಿ ನೌಕರರು ಪಿಂಚಣಿಯನ್ನು ಪ್ರಾರಂಭಿಸಲು ಬ್ಯಾಂಕ್ ಗೆ ತೆರಳುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪಿಂಚಣಿ ಪ್ರಾರಂಭಿಸಲು ಸರ್ಕರಿ ನೌಕರರು ಬ್ಯಾಂಕ್ ಗೆ ತೆರಳಬೇಕಿಲ್ಲ: ಕೇಂದ್ರ ಸರ್ಕಾರ
ಪಿಂಚಣಿ ಪ್ರಾರಂಭಿಸಲು ಸರ್ಕರಿ ನೌಕರರು ಬ್ಯಾಂಕ್ ಗೆ ತೆರಳಬೇಕಿಲ್ಲ: ಕೇಂದ್ರ ಸರ್ಕಾರ
Updated on: 
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಪಿಂಚಣಿಯನ್ನು ಪ್ರಾರಂಭಿಸಲು ಬ್ಯಾಂಕ್ ಗೆ ತೆರಳುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. 
ನಿವೃತ್ತಿ ಪಡೆಯುವಾಗ ನೌಕರರಿಗೆ ಪಿಂಚಣಿ ಪಾವತಿ ಆರ್ಡರ್ ನ್ನು (ಪಿಪಿಒ) ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಈ ಸಂಬಂಧ ಎಲ್ಲಾ ಇಲಾಖೆಗಳಿಗೂ ಆದೇಶ ಹೊರಡಿಸಿದ್ದು, ಪಿಂಚಣಿ ಪಡೆಯುವವರು ಇನ್ನು ಮುಂದೆ ಮೊದಲ ಪಿಂಚಣಿಯನ್ನು ಪಡೆಯಲು ಬ್ಯಾಂಕ್ ಗೆ ಹೋಗಬೇಕಿಲ್ಲ. 
ಪಿಂಚಣಿ ಅರ್ಜಿಯನ್ನು ಸಲ್ಲಿಸುವ ವೇಳೆಯಲ್ಲಿ ತಮ್ಮ ಆಯ್ಕೆಯ ಬ್ಯಾಂಕ್ ನ ಕೇಂದ್ರ ಕಚೇರಿಯನ್ನು ನಮೂದಿಸಲು ಅವಕಾಶ ನೀಡಲಾಗಿದ್ದು, ಪಿಂಚಣಿ ಪಾವತಿ ಆರ್ಡರ್ ನ್ನು ನಿವೃತ್ತರಾಗುವ ನೌಕರರಿಗೇ ನೀಡಲಾಗುತ್ತದೆ. ಈ ಹಿಂದಿನ ನಿಯಮದ ಪ್ರಕಾರ ಪಿಪಿಒ ನ್ನು ನಿವೃತ್ತ ನೌಕರರಿಗೆ ನೀಡುವ ಬದಲು ಬ್ಯಾಂಕ್ ಗಳಿಗೆ ಕಳಿಸಲಾಗುತ್ತಿತ್ತು. ಇದರಿಂದ ಮೊದಲ ಪಿಂಚಣಿಯನ್ನು ಪಡೆಯಲು ಪಿಂಚಣಿದಾರರಿಗೆ ಕಷ್ಟವಾಗುತ್ತಿತ್ತು. ಈಗ ನಿಯಮಗಳನ್ನು ಬದಲಾವಣೆ ಮಾಡಲಾಗಿದ್ದು, ಮೊದಲ ಪಿಂಚಣಿಯನ್ನು ಪಡೆಯಲು ಬ್ಯಾಂಕ್ ಗೆ ಹೋಗಬೇಕಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com