ಉತ್ತರ ಕೋರಿಯಾ ರಫ್ತುಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ನಿರ್ಬಂಧ

ಖಂಡಾಂತರ ಬ್ಯಾಲಸ್ಟಿಕ್ ಕ್ಷಿಪಣಿ (ಐಸಿಬಿಎಂ) ಪರೀಕ್ಷೆ ನಡೆಸಿದ್ದ ಉತ್ತರ ಕೋರಿಯಾ ವಿರುದ್ಧ ನಿರ್ಬಂಧ ವಿಧಿಸಲು ಅಮೆರಿಕ ಮಂಡಿಸಿದ್ದ ಪ್ರಸ್ತಾವನೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅವಿರೋಧವಾಗಿ
ವಿಶ್ವಸಂಸ್ಥೆ
ವಿಶ್ವಸಂಸ್ಥೆ
ವಿಶ್ವಸಂಸ್ಥೆ: ಖಂಡಾಂತರ ಬ್ಯಾಲಸ್ಟಿಕ್ ಕ್ಷಿಪಣಿ (ಐಸಿಬಿಎಂ) ಪರೀಕ್ಷೆ ನಡೆಸಿದ್ದ ಉತ್ತರ ಕೋರಿಯಾ ವಿರುದ್ಧ ನಿರ್ಬಂಧ ವಿಧಿಸಲು ಅಮೆರಿಕ ಮಂಡಿಸಿದ್ದ ಪ್ರಸ್ತಾವನೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಗಿದೆ. 
ಉತ್ತರ ಕೋರಿಯಾದ ರಫ್ತುಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಉತ್ತರ ಕೋರಿಯಾಗೆ ರಫ್ತಿನಿಂದ ಬರುತ್ತಿರುವ ಮೂರನೇ ಒಂದರಷ್ಟು ವಾರ್ಷಿಕ ಆದಾಯಕ್ಕೆ ಕತ್ತರಿ ಬೀಳಲಿದೆ. ಜುಲೈ 3 ಹಾಗೂ ಜುಲೈ 28 ರಂದು ಉತ್ತರ ಕೋರಿಯಾ ನಡೆಸಿದ ಬ್ಯಾಲೆಸ್ಟಿಕ್ ಕ್ಷಿಪಣಿ ಪ್ರಯೋಗದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ನಿರ್ಬಂಧ ವಿಧಿಸಲಾಗಿದೆ. 
ಉತರ ಕೋರಿಯಾದ ವಿರುದ್ಧ ಅತ್ಯಂತ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಉತ್ತರ ಕೋರಿಯಾದಿಂದ ಅತ್ಯಂತ ಹೆಚ್ಚು ರಫ್ತಾಗುವ ಕಲ್ಲಿದ್ದಲು, ಕಬ್ಬಿಣ, ಕಬ್ಬಿಣದ ಅದಿರು, ಸೀ ಫುಡ್ ಗಳಿಗೆ ಪ್ರಧಾನವಾಗಿ ನಿರ್ಬಂಧ ವಿಧಿಸಲಾಗಿದ್ದು, ಉತ್ತರ ಕೋರಿಯಾಗೆ ವರ್ಷಕ್ಕೆ 1 ಬಿಲಿಯನ್ ಡಾಲರ್ ನಷ್ಟ ಉಂಟಾಗಲಿದೆ. 
ರಫ್ತು ಮಾಡುವುದರಿಂದ ಪ್ರತಿ ವರ್ಷ 3 ಬಿಲಿಯನ್ ಡಾಲರ್ ನ್ನು ಉತ್ತರ ಕೋರಿಯಾ ಗಳಿಸುತ್ತಿದ್ದು, ನಿರ್ಬಂಧ ವಿಧಿಸುತ್ತಿರುವುದರಿಂದ ಉತ್ತರ ಕೋರಿಯಾದ ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಅಂಕುಶ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com