ಅಮೆರಿಕ ಅಧ್ಯಕ್ಷ ಟ್ರಂಪ್'ಗೆ 1,001 ರಾಖಿ ಕಳುಹಿಸಿದ ಹರಿಯಾಣ ಮಹಿಳೆಯರು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಖಿ ಹಬ್ಬದ ಬಗ್ಗೆ ಕೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದೆರೆ, ಮೆವಾತ್ ನ ಮರೋರ ಗ್ರಾಮಸ್ಥರು, ಎನ್ ಜಿಒ ಒಂದರ ಸಹಯೋಗದೊಂದಿಗೆ ಅಮೆರಿಕದ ಅಧ್ಯಕ್ಷರಿಗೆ ಸುಮಾರು 1,001 ರಾಖಿ ದಾರಗಳನ್ನು ಕಳುಹಿಸಿದ್ದಾರೆ...
ಗುರ್ಗಾಂವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಖಿ ಹಬ್ಬದ ಬಗ್ಗೆ ಕೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದೆರೆ, ಮೆವಾತ್ ನ ಮರೋರ ಗ್ರಾಮಸ್ಥರು, ಎನ್ ಜಿಒ ಒಂದರ ಸಹಯೋಗದೊಂದಿಗೆ ಅಮೆರಿಕದ ಅಧ್ಯಕ್ಷರಿಗೆ ಸುಮಾರು 1,001 ರಾಖಿ ದಾರಗಳನ್ನು ಕಳುಹಿಸಿದ್ದಾರೆ.
ರಾಖಿಗಳನ್ನು ಕಳುಹಿಸುವ ಮೂಲಕ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಇನ್ನಷ್ಟು ಬಲಗೊಳ್ಳಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ. ಟ್ರಂಪ್ ಅವರನ್ನು ಹೆಸರನ್ನು ಸಾಂಕೇತಿಕವಾಗಿಟ್ಟುಕೊಂಡು ಈ ಗ್ರಾಮದಲ್ಲಿ ಎನ್ ಜಿಎ ಸಮಸ್ಥೆಯೊಂದು ಕಾರ್ಯನಿರ್ವಹಿಸುತ್ತಿದೆ.
ಬಿಂದೇಶ್ವರ್ ಪಾಠಕ್ ರ ಸುಲಭ್ ಅಂತರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆ ಈ ಹಿಂದೆ ಮರೋರ ಗ್ರಾಮವನ್ನು ದತ್ತು ಪಡೆದು ಅದಕ್ಕೆ ಟ್ರಂಪ್ ಗ್ರಾಮ ಎಂದು ನಾಮಕರಣ ಮಾಡಿತ್ತು.
ಗ್ರಾಮದಲ್ಲಿರುವ ಮಹಿಳೆಯರು ಮತ್ತು ಯುವತಿಯರು 1,001 ರಾಖಿಗಳನ್ನು ಟ್ರಂಪ್ ಅವರಿಗಾಗಿ ತಯಾರು ಮಾಡಿದ್ದು 501 ರಾಖಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಯಾರಿಸಿದ್ದಾರೆಂದು ತಿಳಿದುಬಂದಿದೆ. ಈಗಾಗಲೇ ಟ್ರಂಪ್ ಅವರಿಗೆ ರಾಖಿಗಳನ್ನು ಕಳುಹಿಸಲಾಗಿದ್ದು, ಆಗಸ್ಟ್ 7 ರಂದು ರಾಖಿಗಳು ಟ್ರಂಪ್ ಅವರ ಬಳಿ ತಲುಪಲಿದೆ ಎಂದು ಹೇಳಲಾಗುತ್ತಿದೆ.