ಗುಜರಾತ್ ರಾಜ್ಯಸಭೆ ಅಡ್ಡ ಮತದಾನ: ಕೈ ಶಾಸಕರ ಮತ ರದ್ದತಿಗೆ ಕಾಂಗ್ರೆಸ್ ಪಟ್ಟು; ಮತ ಎಣಿಕೆ ವಿಳಂಬ

ಗುಜರಾತ್ ರಾಜ್ಯಸಭಾ ಚುನಾವಣೆ ಬಿಜೆಪಿ-ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಕಣವಾಗಿದ್ದು, ಬಿಜೆಪಿ ಪರ ಇಬ್ಬರು ಕೈ ಶಾಸಕರು ಅಡ್ಡಮತದಾನ ಮಾಡಿದ್ದು, ಅಡ್ಡಮತದಾನ ಮಾಡಿರುವ ಶಾಸಕರ ಮತಗಳನ್ನು...
ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್(ಸಂಗ್ರಹ ಚಿತ್ರ)
ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್(ಸಂಗ್ರಹ ಚಿತ್ರ)
Updated on: 
ಅಹಮದಾಬಾದ್: ಗುಜರಾತ್ ರಾಜ್ಯಸಭಾ ಚುನಾವಣೆ ಬಿಜೆಪಿ-ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಕಣವಾಗಿದ್ದು, ಬಿಜೆಪಿ ಪರ ಇಬ್ಬರು ಕೈ ಶಾಸಕರು ಅಡ್ಡಮತದಾನ ಮಾಡಿದ್ದು, ಅಡ್ಡಮತದಾನ ಮಾಡಿರುವ ಶಾಸಕರ ಮತಗಳನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿದೆ. 
ಕಾಂಗ್ರೆಸ್ ನ ಶಾಸಕರು ಅಡ್ಡ ಮತದಾನ ಮಾಡಿ, ಮತ ಪತ್ರಗಳನ್ನು ಚುನಾವಣೆಯ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೆ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಡ್ದಮತದಾನ ಮಾಡಿರುವ ಇಬ್ಬರು ಶಾಸಕರ ಮತಗಳನ್ನು ರದ್ದುಗೊಳಿಸಬೇಕೆಂದು ಪಟ್ಟು ಹಿಡಿದಿದೆ. ಆದರೆ ಕಾಂಗ್ರೆಸ್ ನ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದ್ದು, ಮತ ಎಣಿಕೆ ಪ್ರಕ್ರಿಯೆ ಪ್ರಾರಂಭ ವಿಳಂಬವಾಗಿದೆ. 
ಇದೇ ವೇಳೆ ಕೊನೆ ಘಳಿಗೆಯಲ್ಲಿ ಕೈ ಕೊಟ್ಟ ಎನ್ ಸಿಪಿ ವಿರುದ್ಧವೂ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದು, ಎನ್ ಸಿಪಿಯ ಓರ್ವ ಶಾಸಕ ಬಿಜೆಪಿ ಪರ ಮತ ಚಲಾಯಿಸಿರುವುದಕ್ಕೆ ಸೋನಿಯಾ ಗಾಂಧಿ ಶರದ್ ಪವಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com