'ನೀವೇನು ಪಾಕಿಸ್ತಾನ ಬೆಂಬಲಿಗರೇ': 'ಭಾರತ್ ಮಾತಾ ಕಿ ಜೈ' ಎನ್ನದವರಿಗೆ ಬಿಜೆಪಿ ಸಚಿವರ ಪ್ರಶ್ನೆ

ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗದವರನ್ನು ಪಾಕಿಸ್ತಾನದ ಬೆಂಬಲಿಗರು ಹಾಗೂ ಪಾಕಿಸ್ತಾನಿಗಳು ಎಂದು ಬಿಹಾರ ಸಚಿವ ವಿನೋದ್ ಕುಮಾರ್ ಅವರು ದೂರಿದ್ದಾರೆ...
ಬಿಹಾರ ಸಚಿವ ವಿನೋದ್ ಕುಮಾರ್
ಬಿಹಾರ ಸಚಿವ ವಿನೋದ್ ಕುಮಾರ್
ಪಾಟ್ನಾ: ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗದವರನ್ನು ಪಾಕಿಸ್ತಾನದ ಬೆಂಬಲಿಗರು ಹಾಗೂ ಪಾಕಿಸ್ತಾನಿಗಳು ಎಂದು ಬಿಹಾರ ಸಚಿವ ವಿನೋದ್ ಕುಮಾರ್ ಅವರು ದೂರಿದ್ದಾರೆ. 
ನಿನ್ನೆಯಷ್ಟೇ ಬಿಹಾರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ವಿನೋದ್ ಕುಮಾರ್ ಅವರು ಮಾತನಾಡುತ್ತಿದ್ದರು. ಈ ವೇಳೆ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಾರೆ, ಅಲ್ಲದೆ, ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೂ ಘೋಷಣೆ ಕೂಗಿ ಕೈ ಎತ್ತುವಂತೆ ಸೂಚಿಸಿದ್ದಾರೆ. ಕೆಲವು ಈ ವೇಳೆ ಕೈ ಎತ್ತಿಲ್ಲ. 
ಇದನ್ನು ಗಮಿಸಿದ ವಿನೋದ್ ಕುಮಾರ್ ಕುಮಾರ್ ಅವರು, ಕೆಂಡಾಮಂಡಲಗೊಂಡು, ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದಾಗ ಕೆಲವರು ಕೈ ಎತ್ತದೇ ಇರುವುದನ್ನು ನಾನು ನೋಡಿದೆ. ನೀವೇನು ಪಾಕಿಸ್ತಾನದ ಬೆಂಬಲಿಗರೇ ಎಂದು ನೆರೆದಿದ್ದ ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ, ಅಲ್ಲದೆ, ನೀವು ಮೊದಲು ಭಾರತ ಮಾತೆಯ ಪುತ್ರರು. ನಂತರ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದ ಸಹೋದರರು ಎಂದು ಹೇಳಿದ್ದಾರೆ. 
ವಿನೋದ್ ಕುಮಾರ್ ಅವರು ಬಿಜೆಪಿ ಶಾಸಕರಾಗಿದ್ದು, ಇತ್ತೀಚೆಗೆ ಹೊಸದಾಗಿ ಬಿಹಾರ ರಾಜ್ಯದಲ್ಲಿ ರಚನೆಯಾಗಿರುವ ಬಿಜೆಪಿ-ಜೆಡಿಯು ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ನನ್ನ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಲಾಗಿದೆ: ವಿನೋದ್ ಕುಮಾರ್
ಭಾರತ್ ಮಾತಾ ಕಿ ಜೈ ಎನ್ನದವರು ಪಾಕಿಸ್ತಾನದ ಬೆಂಬಲಿಗರು ಎಂದು ಜರಿಯುವ ಮೂಲಕ ವಿವಾದ ಹುಟ್ಟುಹಾಕಿದ್ದ ಸಚಿವ ವಿನೋದ್ ಕುಮಾರ್ ಅವರು ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ವಿಡಿಯೋ ನೋಡಿದ ಬಳಿಕ ಸತ್ಯ ಎಲ್ಲರಿಗೂ ತಿಳಿಯಲಿದೆ. ನನ್ನ ಭಾವನೆಗಳು ತಪ್ಪಿಲ್ಲ ಎಂಬುದು ತಿಳಿಯುತ್ತದೆ. ದುರುದ್ದೇಶದಿಂದ ನಾನು ನನ್ನ ಜೀವನದಲ್ಲಿಯೇ ಎಂದಿಗೂ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿಲ್ಲ. ನನ್ನ ಹೇಳಿಕೆಯಿಂದ ಪತ್ರಕರ್ತರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಪತ್ರಕರ್ತರು ಹಾಗೂ ಮಾಧ್ಯಮದ ಮೇಲೆ ನನಗೆ ಗೌರವವಿದೆ. ಯಾರಿಗೂ ನೋವುಂಟು ಮಾಡಬೇಕೆಂಬ ಉದ್ದೇಶದಿಂದ ನಾನು ಹೇಳಿಕೆಯನ್ನು ನೀಡಿಲ್ಲ ಎಂದಿದ್ದಾರೆ. 
ವಿನೋದ್ ಕುಮಾರ್ ಅವರು ಬಿಜೆಪಿ ಶಾಸಕರಾಗಿದ್ದು, ಇತ್ತೀಚೆಗೆ ಹೊಸದಾಗಿ ಬಿಹಾರ ರಾಜ್ಯದಲ್ಲಿ ರಚನೆಯಾಗಿರುವ ಬಿಜೆಪಿ-ಜೆಡಿಯು ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಈ ಹಿಂದೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ಯಾದವ್ ಅವರು ಬಿಹಾರ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆಂದು ಹೇಳಿದ್ದರು. 
2015 ಬಿಹಾರ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಸಂಸದ ಅಶ್ವಿನಿ ಕುಮಾರ್ ಅವರು ಜೆಡಿಯು ಮುಖಂಡ ನಿತೀಶಅ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ಯಾದವ್ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದರು. ಇದಾದ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೂ ಬಿಜೆಪಿ ಸೋತರೆ ಪಾಕಿಸ್ತಾನದವರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆಂದು ಹೇಳಿದ್ದರು. ಈ ಹೇಳಿಕೆ ದೊಡ್ಡ ವಿವಾದವನ್ನೇ ಹುಟ್ಟು ಹಾಕಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com