ಬೀದಿಗೆ ಬಂದ ರೇಮಂಡ್‌ ಕಂಪನಿಯ ಮಾಲೀಕ, ಮನೆ ಬಾಡಿಗೆ ಕಟ್ಟಲು ಹೆಣಗಾಟ!

ಸಾವಿರಾರು ಕೋಟಿ ರುಪಾಯಿಗಳ ಒಡೆಯ, ದೇಶದ ಸಿರಿವಂತರಲ್ಲಿ ಒಬ್ಬರಾಗಿದ್ದ ರೇಮಂಡ್‌ ವಸ್ತ್ರ ಕಂಪನಿಯ ಮಾಲೀಕ ವಿಜಯಪತ್‌ ಸಿಂಗಾನಿಯಾ...
ವಿಜಯಪತ್ ಸಿಂಗಾನಿಯಾ
ವಿಜಯಪತ್ ಸಿಂಗಾನಿಯಾ
ಮುಂಬೈ: ಸಾವಿರಾರು ಕೋಟಿ ರುಪಾಯಿಗಳ ಒಡೆಯ, ದೇಶದ ಸಿರಿವಂತರಲ್ಲಿ ಒಬ್ಬರಾಗಿದ್ದ ರೇಮಂಡ್‌ ವಸ್ತ್ರ ಕಂಪನಿಯ ಮಾಲೀಕ ವಿಜಯಪತ್‌ ಸಿಂಗಾನಿಯಾ ಅವರು ಈಗ ಅಕ್ಷರ ಸಹ ಬೀದಿಗೆ ಬಂದಿದ್ದು, ಹಣಕಾಸು ನೆರವಿಗಾಗಿ ಮಗನ ವಿರುದ್ಧವೇ ಕೋರ್ಟ್‌ ಮೆಟ್ಟಿಲೇರಿದ್ದಾರೆ.
ರೇಮಂಡ್ಸ್ ಲಿಮಿಟೆಡ್ ಎಂಬ ವಸ್ತ್ರೋದ್ಯಮ ಸ್ಥಾಪಿಸಿ ಪುರುಷರ ಮನೆ ಮಾತಾಗಿದ್ದ ರೇಮಂಡ್‌ ಕಂಪೆನಿಯ ಮಾಲೀಕ ಇಂದು ಮಗನ ನಿರ್ಲಕ್ಷದಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡುವಂತಾಗಿದೆ ಎಂದು ಮುಂಬೈ ಮಿರರ್‌ ವರದಿ ಮಾಡಿದೆ.
ವಿಜಯಪತ್‌ ತಮ್ಮ ಎಲ್ಲಾ ಆಸ್ತಿ ಹಾಗೂ ಕಂಪೆನಿಯ ಷೇರುಗಳನ್ನು ಮಗ ಗೌತಮ್‌ ಸಿಂಗಾನಿಯಾ ಅವರಿಗೆ ಬರೆದುಕೊಟ್ಟಿದ್ದಾರೆ. ಮುಂಬೈನಲ್ಲಿರುವ 36 ಅಂತಸ್ತಿನ ಜೆ.ಕೆ.  ಹೌಸ್‌ನಿಂದ ವಿಜಯಪತ್‌ ಅವರನ್ನು ಮಗ ಗೌತಮ್‌ ಹೊರ ಹಾಕಿದ್ದಾರೆ.
ಬಾಡಿಗೆ ಮನೆಯಲ್ಲಿ ವಾಸವಾಗಿರುವ ವಿಜಯಪತ್‌ ಅವರು ಬಾಡಿಗೆ ಕಟ್ಟಲು ಹರಸಾಹಸ ಪಡುತ್ತಿದ್ದಾರೆ. ಇದರ ಜತೆಗೆ ಅವರಿಗೆ ನೀಡಿದ್ದ ಕಾರನ್ನು ಗೌತಮ್‌ ವಾಪಸ್ ಪಡೆದಿದ್ದಾರೆ ಎಂದು ವರದಿ ಮಾಡಲಾಗಿದೆ.
ವಿಜಯಪತ್‌ ಅವರು ಈಗ ಮಲಬಾರ್ ಹಿಲ್ ನಲ್ಲಿರುವ 36 ಅಂತಸ್ತಿನ ಜೆಕೆ ಹೌಸ್ ನಲ್ಲಿ ಒಂದು ಡುಫ್ಲೆಕ್ಸ್‌ ಮನೆ, ಕಾರು ಹಾಗೂ ಪ್ರತಿ ತಿಂಗಳು 7 ಲಕ್ಷ ರುಪಾಯಿ ಹಣವನ್ನು ಕೊಡಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತ ಉದ್ಯಮಿ ವಿಜಯಪತ್ ಅವರು ಬಿಡಿಗಾಸಿಗೂ ಪರದಾಡುತ್ತಿದ್ದಾರೆ ಎಂದು ಅವರ ಪರ ವಾದಿಸುತ್ತಿರುವ ವಕೀಲರು ಹೇಳಿರುವುದಾಗಿ ಮುಂಬೈ ಮಿರರ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com