ಕೆಎಲ್ ಎಫ್ ನೊಂದಿಗೆ ನಂಟು: ಮಧ್ಯಪ್ರದೇಶದಲ್ಲಿ ಮೂವರ ಶಂಕಿತ ಉಗ್ರರ ಬಂಧನ

ನಿಷೇಧಿತ ಖಲಿಸ್ತಾನ್ ಲಿಬೆರೇಷನ್ ಪಡೆ(ಕೆಎಲ್ಎಫ್)ಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಮಧ್ಯಪ್ರದೇಶದ ಗ್ವಾಲಿಯರ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಭೋಪಾಲ್: ನಿಷೇಧಿತ ಖಲಿಸ್ತಾನ್ ಲಿಬೆರೇಷನ್ ಪಡೆ(ಕೆಎಲ್ಎಫ್)ಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಗುರುವಾರ ಮೂವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ಪಂಜಾಬ್ ಪೊಲೀಸ್ ಹಾಗೂ ಮಧ್ಯ ಪ್ರದೇಶ ಉಗ್ರ ನಿಗ್ರಹ ದಳದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗ್ವಾಲಿಯರ್ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಮೂವರು ಶಂಕಿತರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಬಲ್ಕರ್ ಸಿಂಗ್, ಬಲ್ವಿಂದರ್ ಸಿಂಗ್ ಹಾಗೂ ಸತಿಂದರ್ ಅಲಿಯಾಸ್ ಛೋಟು ರಾವತ್ ಎಂದು ಗುರುತಿಸಲಾಗಿದೆ.
ಈ ಮೂವರು ಶಂಕಿತ ಉಗ್ರರು 25 ರಿಂದ 48 ವರ್ಷದೊಳಗಿನವರಾಗಿದ್ದು, ಖಲಿಸ್ತಾನ್ ಪರ ಉಗ್ರರ ಸಂಘಟನೆಗಳಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com