ಜಮ್ಮು ಮತ್ತು ಕಾಶ್ಮೀರ: ಭಾರತೀಯ ವಾಯು ಪಡೆಗೆ ಸೇರಿದ ಮಾನವ ರಹಿತ ವೈಮಾನಿಕ ವಿಮಾನ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ.
ಈ ವೈಮಾನಿಕ ವಿಮಾನ ರಡಾರ್ ಸಂಪರ್ಕವನ್ನು ಕಳೆದುಕೊಂಡಿತ್ತು. ಇದೀಗ ವಿಮಾನವನ್ನು ಪತ್ತೆ ಹಚ್ಚಲಾಗಿದ್ದು ಕಠುವಾ ಜಿಲ್ಲೆಯ ಲಡೋರ್ ಗ್ರಾಮದ ಸಮೀಪ ವಿಮಾನ ಪತನಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಾನವ ರಹಿತ ವೈಮಾನಿಕ ವಿಮಾನ ಪತನವಾಗಿರುವುದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ. ಇನ್ನು ವಿಮಾನ ಪತನಗೊಂಡಿರುವ ಹಿನ್ನೆಲೆ ವಾಯುಪಡೆ ತನಿಖೆಗೆ ಆದೇಶಿಸಿದೆ.