ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಯೋಧರನ್ನು ಕಳೆದುಕೊಳ್ಳುವುದು ದೇಶಕ್ಕಾಗುವ ದೊಡ್ಡ ನಷ್ಟ: ರಕ್ಷಣಾ ತಜ್ಞರು

ಜಮ್ಮು ಮತ್ತು ಕಾಶ್ಮೀರದ ಕೃಷ್ಣಘಾಟಿಯಲ್ಲಿ ಭಾರತೀಯ ಸೇನೆ ಮೇಲೆ ಉಗ್ರರು ದಾಳಿ ನಡೆಸಿದ್ದ ಪ್ರಕರಣಕ್ಕೆ ರಕ್ಷಣಾ ತಜ್ಞರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದು, ಯೋಧರನ್ನು ಕಳೆದುಕೊಳ್ಳುವುದು ದೇಶಕ್ಕಾಗುವ ದೊಡ್ಡ ನಷ್ಟ...
ಲುಧಿಯಾನ: ಜಮ್ಮು ಮತ್ತು ಕಾಶ್ಮೀರದ ಕೃಷ್ಣಘಾಟಿಯಲ್ಲಿ ಭಾರತೀಯ ಸೇನೆ ಮೇಲೆ ಉಗ್ರರು ದಾಳಿ ನಡೆಸಿದ್ದ ಪ್ರಕರಣಕ್ಕೆ ರಕ್ಷಣಾ ತಜ್ಞರು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದು, ಯೋಧರನ್ನು ಕಳೆದುಕೊಳ್ಳುವುದು ದೇಶಕ್ಕಾಗುವ ದೊಡ್ಡ ನಷ್ಟ ಎಂದು ಭಾನುವಾರ ಹೇಳಿದ್ದಾರೆ. 
ನಿನ್ನೆಯಷ್ಟೇ ಕೃಷ್ಣಘಾಟಿಯಲ್ಲಿ ಭಾರತೀಯ ಸೇನಾ ನೆಲೆ ಮೇಲೆ ದಾಳಿ ಮಾಡಿದ್ದ ಉಗ್ರರು ಓರ್ವ ಯೋಧನನ್ನು ಬಲಿ ಪಡೆದುಕೊಂಡಿದ್ದರು. ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಕರ್ನಲ್. ಡಿ.ಎಸ್ ಧಿಲೋನ್ ಅವರು, ದಾಳಿ ನಿಜಕ್ಕೂ ದುರಾದೃಷ್ಟಕರವಾದದ್ದು. ಪ್ರತೀ ತಿಂಗಳೂ ಒಬ್ಬೊಬ್ಬ ಯೋಧನನ್ನು ಕಳೆದುಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ.
ಗಡಿಯಲ್ಲಿ ಪ್ರತೀ ಬಾರಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದಾಗಲೆಲ್ಲಾ ಭಾರತೀಯ ಸೇನೆ ದಿಟ್ಟವನ್ನೇ ನೀಡುತ್ತಿದೆ. ಉಗ್ರರ ವಿರುದ್ಧ ಭಾರತೀಯ ಸೇನೆ ಜಂಟಿಯಾಗಿ ಕಾರ್ಯಾಚರಣೆಗಳನ್ನು ನಡೆಸುತ್ತಿಲೇ ಇದೆ. ಯೋಧರನ್ನು ಕಳೆದುಕೊಳ್ಳದಂತೆ ಹಾಗೂ ಯಾವ ರೀತಿಯ ದಾಳಿಗಳೂ ನಡೆಯಬಾರದೆಂದು ನಮ್ಮಿಂದ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಲೇ ಇದ್ದೇವೆ ಎಂದು ತಿಳಿಸಿದ್ದಾರೆ. 
ಇದರಂತೆ ಮತ್ತೊಬ್ಬರು ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು ಮಾತನಾಡಿ, ಗಡಿಯಲ್ಲಿ ಸದಾ ಕಾಲ ಬೆದರಿಕೆಗಳು ಹಾಗೂ ಎಚ್ಚರಿಕೆಗಳನ್ನು ಎದುರಿಸುತ್ತಲೇ ಇರುತ್ತೇವೆ. ಯೋಧರನ್ನು ಕಳೆದುಕೊಳ್ಳುವುದು ಹೃದಯ ವಿದ್ರಾವಕ ಸಂಗತಿ. ಒಂದೆಡೆ ಯೋಧರನ್ನು ಕಳೆದುಕೊಳ್ಳುತ್ತಿದ್ದರೂ, ಭಾರತೀಯ ಸೇನೆ ಸದಾಕಾಲ ಪಾಕಿಸ್ತಾನಕ್ಕೆ ನಾವು ಸಿದ್ಧರಿದ್ದೇವೆಂಬ ಉತ್ತರವನ್ನೇ ನೀಡುತ್ತಲಿದೆ. ಭಾರತೀಯ ಮೇಲೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುವುದು ಹೊಸದೇನಲ್ಲ ಎಂದಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com