35ಎ ವಿಧಿಯ ತಿದ್ದುಪಡಿ ಪ್ರಸ್ತಾವನೆಯನ್ನು ವಿರೋಧಿಸಿ ಪ್ರತಿಭಟನೆಗೆ ಎನ್ ಸಿ ಚಿಂತನೆ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಯ ಪ್ರಮುಖ ಭಾಗವಾಗಿರುವ ಆರ್ಟಿಕಲ್ 35ಎ ಗೆ ಕಾನೂನಿನ ಸವಾಲು ಎದುರಾಗಿದ್ದು, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪ್ರತ್ಯೇಕತಾವಾದಿಗಳು 35 ಎಗೆ
ಜಮ್ಮು-ಕಾಶ್ಮೀರ
ಜಮ್ಮು-ಕಾಶ್ಮೀರ
ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಯ ಪ್ರಮುಖ ಭಾಗವಾಗಿರುವ ಆರ್ಟಿಕಲ್ 35ಎ ಗೆ ಕಾನೂನಿನ ಸವಾಲು ಎದುರಾಗಿದ್ದು, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪ್ರತ್ಯೇಕತಾವಾದಿಗಳು 35 ಎಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಚಿಂತನೆ ನಡೆಸಿವೆ. 
ಪ್ರತ್ಯೇಕತಾವಾದಿಗಳ ಸಂಘಟನೆಗಳಾದ ಹುರಿಯತ್ ಕಾನ್ಫರೆನ್ಸ್ ಹಾಗೂ ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್( ಜೆಕೆಎಲ್ಎಫ್) 35ಎ ತಿದ್ದುಪಡಿಗೆ ಬಿಜೆಪಿ ಒತ್ತಾಯಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿದ್ದು, ನ್ಯಾಷನಲ್ ಕಾನ್ಫರೆನ್ಸ್ ಸಹ ಇದಕ್ಕೆ ಪೂರಕವಾಗಿ ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದೆ. 
35ಎ ವಿಧಿ ಜಮ್ಮು-ಕಾಶ್ಮೀರದ ಕಾಯಂ ನಿವಾಸಿಗಳ ಸ್ಥಾನಮಾನವನ್ನು ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ಸಂವಿಧಾನದ ವಿಧಿಯಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರಲ್ಲಿ ಪ್ರಮುಖ ಭಾಗವಾಗಿದ್ದು, ಇದರಿಂದಾಗಿ ರಾಜ್ಯದ ಕಾಯಂ ನಿವಾಸಿಗಳಲ್ಲಿ ಪ್ರತ್ಯೇಕತೆಯ ಭಾವನೆ ಬೆಳೆಯುತ್ತದೆ. ಅಲ್ಲದೇ ಜಮ್ಮು-ಕಾಶ್ಮೀರ ಹಾಗೂ ದೇಶದ ಇತರ ಭಾಗಗಳ ನಡುವೆ ರಾಜಕೀಯ ಕಂದಕ ನಿರ್ಮಾಣವಾಗಲಿದೆ ಎಂದು ಬಿಜೆಪಿ ಟೀಕಿಸಿ, 35 ಎ ವಿಧಿಯ ತಿದ್ದುಪಡಿಗೆ ಆಗ್ರಹಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com