ಪಶ್ಚಿಮಬಂಗಾಳ: ಬ್ಲೂವೇಲ್ ಭೂತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ

ಸಾವಿಗೆ ಪ್ರಚೋದನೆ ನೀಡುವ ಆಪಾಯಕಾರಿ ಮೊಬೈಲ್ ಗೇಮ್ ಬ್ಲೂ ವೇಲ್'ಗೆ 10ನೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿ ಬಲಿಯಾಗಿದ್ದಾನೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಿಡ್ನಾಪುರ್: ಸಾವಿಗೆ ಪ್ರಚೋದನೆ ನೀಡುವ ಆಪಾಯಕಾರಿ ಮೊಬೈಲ್ ಗೇಮ್ ಬ್ಲೂ ವೇಲ್'ಗೆ 10ನೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿ ಬಲಿಯಾಗಿದ್ದಾನೆ. 
ಅಪಯಕಾರಿಯಾಗಿರುವ ಬ್ಲೂವೇಲ್ ಮೊಬೈಲ್ ಗೇಮ್ ಮೇಲೆ ನಿಷೇಧ ಹೇರಬೇಕೆಂದು ದೇಶದಾದ್ಯಾಂತ ಭಾರೀ ಒತ್ತಾಯ ಕೇಳಿ ಬರುತ್ತಿರುವ ಬೆನ್ನಲ್ಲೇ, ಗೇಮ್ ನ ಚಾಲೆಂಜ್ ಪೂರ್ಣಗೊಳಿಸಲು ಪಶ್ಚಿಮಬಂಗಾಳದಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಅಂಕನ್ (14) ಆತ್ಮಹತ್ಯೆಗೆ ಶರಣಾಗಿರುವ ಬಾಲಕನೆಂದು ತಿಳಿದುಬಂದಿದೆ. ಹಲವು ದಿನಗಳಿಂದಲೂ ಬ್ಲೂವೇಲ್ ಗೇಮ್ ಆಡುತ್ತಿದ್ದ ವಿದ್ಯಾರ್ಥಿ, ಆಟದ ಅಂತಿಮ ಘಟ್ಟವನ್ನು ಪೂರ್ಣಗೊಳಿಸಲು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ಲಾಸ್ಟಿಕ್ ಕವರ್ ನ್ನು ಗಟ್ಟಿಯಾಗಿ ತಲೆಗೆ ಹಾಕಿಕೊಂಡಿರುವ ಬಾಲಕ ದಾರದಲ್ಲಿ ಗಟ್ಟಿಯಾಗಿ ಕಟ್ಟಿಕೊಂಡಿದ್ದಾನೆ. ನಂತರ ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. 
ಶಾಲೆಯಿಂದ ಮನೆಗೆ ಅಂಕನ್ ನನ್ನು ತಾಯಿ ಊಟಕ್ಕೆ ಕರೆದಿದ್ದಳು. ಈ ವೇಳೆ ಸ್ನಾನ ಮಾಡಿದ ಬಳಿಕ ಊಟ ಮಾಡುವುದಾಗಿ ಆಂಕನ್ ತಿಳಿಸಿದ್ದ. ಗಂಟೆಗಳಾದರೂ ಆತ ರೂಮಿನಿಂದ ಹೊರ ಬಂದಿರಿಲಿಲ್ಲ. ನಂತರ ರೂಮಿನ ಒಳಗೆ ಹೋದಾಗ ಯಾವುದೇ ಚಲನೆ ಹಾಗೂ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದ. ನಂತರ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಸಾವನ್ನಪ್ಪಿದ್ದಾನೆಂದು ತಿಳಿಸಿದರು ಎಂದು ಅಂಕನ್ ತಂದೆ ಹೇಳಿಕೊಂಡಿದ್ದಾರೆ. 
ಭಯಾನಕ ಬ್ಲೂವೇಲ್ ಗೇಮ್ ನಿಂದಾಗಿ ಯುರೋಪ್ ಮತ್ತು ರಷ್ಯಾದಾದ್ಯಂತ ಈ ವರೆಗೂ ಸುಮಾರು 150 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಇದೇ ಗೇಮ್ ಭಾರತೀಯರನ್ನೂ ಭೀತಿಗೊಳಗಾಗುವಂತೆ ಮಾಡುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಇಂದೋರ್ ನಲ್ಲಿಯೂ ಬಾಲಕನೋರ್ವ ಶಾಲಾ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ನಂತರ ಶಿಕ್ಷಕರು ಆತನನ್ನು ರಕ್ಷಣೆ ಮಾಡಿದ್ದರು. 
ಬ್ಲೂ ವೇಲ್ ಒಂದು ಆನ್ ಲೈನ್ ಗೇಮ್ ಆಗಿದ್ದು, ಇದರಲ್ಲಿ ಸವಾಲು ಸ್ವೀಕರಿಸಿದವರಿಗೆ ದಿನಕ್ಕೊಂದು ಟಾಸ್ಕ್ ನೀಡಲಾಗುತ್ತದೆ. ಸವಾಲು ಸ್ವೀಕರಿಸುವಾಗ ಕಡೆಯಲ್ಲಿ ನೀವು ಸಾಯಬೇಕಾಗುತ್ತದೆ ಎಂದು ಸೂಚಿಸಲಾಗುತ್ತದೆ. ಮಾನಸಿಕವಾಗಿ ದುರ್ಬಲ ಮಕ್ಕಳನ್ನೇ ಗೇಮ್ ನತ್ತ ಸೆಳೆಯಲಾಗುತ್ತದೆ. ಒಂದು ವೇಳೆ, ಮಕ್ಕಳು ಮಧ್ಯದಲ್ಲಿ ಹಿಂದೆ ಸರಿಯಲು ಯತ್ನಿಸಿದರೆ, ನಿಮ್ಮ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ನಮ್ಮವರು ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಹೆದರಿಸಲಾಗುತ್ತದೆ. 
ಇದನ್ನು ಒಪ್ಪಿದವರಿಗೆ ದಿನಕ್ಕೊಂದರಂತೆ 50 ದಿನ ಹೊಸ ಟಾಸ್ಕ್ ನೀಡಲಾಗುತ್ತದೆ. ರಾತ್ರಿ ಏಳುವುದು, ಭಯಾನಕ ಚಿತ್ರ ನೋಡುವುದು, ನರ ಕತ್ತರಿಸಿಕೊಳ್ಳುವುದು ಹೀಗೆ ನಾನು ಕಠಿಣ ಟಾಸ್ಕ್ ಗಳು ಇರುತ್ತದೆ. 50ನೇ ದಿನ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com