ಸಾಂವಿಧಾನಿಕ ಪೀಠದಿಂದ ಆರ್ಟಿಕಲ್ 35ಎ ವಿರುದ್ಧದ ಅರ್ಜಿಗಳ ವಿಚಾರಣೆ: ಸುಪ್ರೀಂ ಕೋರ್ಟ್

ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ ಆರ್ಟಿಕಲ್ 35 ಎ ಬಗ್ಗೆ ಮುಂದಿನ ದಿನಗಳಲ್ಲಿ ತ್ರಿಸದಸ್ಯ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಸೋಮವಾರ ಸುಪ್ರೀಂ ಕೋರ್ಟ್ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ ಆರ್ಟಿಕಲ್ 35 ಎ ಬಗ್ಗೆ ಮುಂದಿನ ದಿನಗಳಲ್ಲಿ ತ್ರಿಸದಸ್ಯ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಸೋಮವಾರ ಸುಪ್ರೀಂ ಕೋರ್ಟ್ ಹೇಳಿದೆ.

ಜಮ್ಮು ಮತ್ತು ಕಾಶ್ಮೀರ ನಿವಾಸಿಗಳಿಗೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 35ಎ ಕುರಿತಾದ ವಿವಿಧ ಪ್ರಕರಣಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠ ನಡೆಸಲಿದ್ದು, ಆಗತ್ಯ ಬಿದ್ದರೆ ಅದನ್ನು ಪಂಚ ಸದಸ್ಯರ ಪೀಠಕ್ಕೆ ವರ್ಗ  ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ತ್ರಿಸದಸ್ಯ ಪೀಠದ ಕಾರ್ಯವಿಧಾನದಲ್ಲಿ ಯಾವುದೇ ರೀತಿಯ ಕೊರತೆಗಳು ಉಂಟಾದರೆ ಆಗ ಆರ್ಟಿಕಲ್ 35ಎ ಸಂಬಂಧಿಸಿದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಪಂಚ ಸದಸ್ಯರ  ಪೀಠಕ್ಕೆ ವರ್ಗ ಮಾಡುವುದಾಗಿ  ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಎಎಂ ಖಾನ್ ವಿಲ್ಕರ್ ನೇತೃತ್ವದ ಪೀಠ ಸೋಮವಾರ ಹೇಳಿದೆ.

ಇನ್ನು ಈ ಬಗ್ಗೆ ತನ್ನ ವಾದ ಮಂಡಿಸಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸಮಿತಿ 2002ರಲ್ಲಿ ಆರ್ಟಿಕಲ್ 35ಎ ಕುರಿತಾದ ಎಲ್ಲ ಗೊಂದಗಳನ್ನೂ ನಿವಾರಿಸಿಕೊಳ್ಳಲಾಗಿದೆ ಎಂದು ಹೇಳಿದೆ,

ಆದರೆ ಚಾರು ವಾಲಿಖನ್ನಾ ಎಂಬುವವರು ಆರ್ಟಿಕಲ್ 35ಎ ಕುರಿತಾಗಿ ಅರ್ಜಿ ಸಲ್ಲಿಸಿದ್ದು, ಆರ್ಟಿಕಲ್ 35ಎ ಸೆಕ್ಷನ್ 6 ಅನ್ನು ಅವರು ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ಈ ಸಂವಿಧಾನದ ಅನ್ವಯ ಜಮ್ಮು ಮತ್ತು ಕಾಶ್ಮೀರದ ಶಾಶ್ವತ  ನಿವಾಸಿಯಾಗಿರುವ ಮಹಿಳೆ ಹೊರ ರಾಜ್ಯದ ಪುರುಷನನ್ನು ಮದುವೆಯಾದರೆ ಆಕೆಗೆ ಮತ್ತು ಆಕೆಯ ಸಂತಾನಕ್ಕೆ ಕಾಶ್ಮೀರ ವಿಶೇಷ ಸ್ಥಾನಮಾನದ ಯಾವುದೇ ಹಕ್ಕುಗಳು ಸಿಗುವುದಿಲ್ಲ. ವಿಶೇಷ ಕಾಶ್ಮೀರದ ಶಾಶ್ವತ ನಿವಾಸಿಯಾದ  ಹೊರತಾಗಿಯೂ ಆಕೆ ಮತ್ತು ಆಕೆಯ ಮಕ್ಕಳು ವಿಶೇಷ ಸ್ಥಾನಮಾನದ ಹಕ್ಕುಗಳಿಂದ ವಂಚಿತರಾಗುತ್ತಾರೆ. ಕಾಶ್ಮೀರದಲ್ಲಿ ಆಕೆ ಮತ್ತು ಆಕೆಯ ಮಕ್ಕಳು ಆಸ್ತಿ ಮಾಡುವಂತಿಲ್ಲ. ಕಾಶ್ಮೀರದ ಜನತೆಗೆ ಸರ್ಕಾರಿ ನೌಕರಿಗಳಲ್ಲಿ ಸಿಗುವ  ಮೀಸಲಾತಿ ಸಿಗುವುದಿಲ್ಲ. ಇದಲ್ಲದೆ ಕಾಶ್ಮೀರದಲ್ಲಿ ಆಕೆಗೆ ಸೇರುವ ಆಸ್ತಿಗಳನ್ನೂ ಕೂಡ ಆಕೆ ಕಳೆದುಕೊಳ್ಳಬೇಕಾಗುತ್ತದೆ ಎಂದು ವಾಲಿಖನ್ನಾ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com