ಲತಾ ರಜನೀಕಾಂತ್
ದೇಶ
ಬಾಡಿಗೆ ಪಾವತಿಸದ ಹಿನ್ನೆಲೆ: ಲತಾ ರಜನೀಕಾಂತ್ ಶಾಲೆಗೆ ಬೀಗಮುದ್ರೆ
ತಮಿಳು ಚಿತ್ರರಂಗದ ಸೂಪರ್ ಸ್ಚಾರ್ ರಜನೀಕಾಂತ್ ಅವರ ಪತ್ನಿ ಲತಾ ರಜನೀಕಾಂತ್ ಒಡೆತನದ ಶಾಲೆಗೆ ಬೀಗಮುದ್ರೆ ...
ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಚಾರ್ ರಜನೀಕಾಂತ್ ಅವರ ಪತ್ನಿ ಲತಾ ರಜನೀಕಾಂತ್ ಒಡೆತನದ ಶಾಲೆಗೆ ಬೀಗಮುದ್ರೆ ಹಾಕಲಾಗಿದೆ.
ಚೆನ್ನೈನಲ್ಲಿರುವ ಆಶ್ರಮ ಮೆಟ್ರಿಕುಲೇಶನ್ ಶಾಲೆ ಕಟ್ಟಡಕ್ಕೆ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಶಾಲೆಗೆ ಬೀಗ ಜಡಿಯಲಾಗಿದೆ.
ಶಾಲೆಗೆ ಬೀಗ ಮುದ್ರೆ ಹಾಕಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ, ಶಾಲೆಯ ಕಟ್ಟಡದ ಬಾಡಿಗೆ ಹಣವನ್ನು ಮಾಲೀಕನಿಗೆ ಲತಾ ರಜನೀಕಾಂತ್ ಪಾವತಿಸಿರಲಿಲ್ಲ.
ರಜನೀಕಾಂತ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಈ ಕೆಲಸ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

