ಕೇಂದ್ರ ಸಚಿವರಿಗೆ ಇನ್ನು "ಮಾಲಿನ್ಯ ರಹಿತ" ಎಲೆಕ್ಟ್ರಿಕ್ ಸೆಡಾನ್ ಕಾರುಗಳು!

ಮಹತ್ವದ ಬೆಳವಣಿಗೆಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಕಾರು ಕಂಪೆನಿಯಾದ ಸೆಡಾನ್ ಸಂಸ್ಥೆ ಕೇಂದ್ರ ಸರ್ಕಾರದ ಮುಂದೆ ಬರೊಬ್ಬರಿ 10 ಸಾವಿರ ಬ್ಯಾಟರಿ ಚಾಲಿತ ಸೆಡಾನ್ ಕಾರುಗಳನ್ನು ಪೂರೈಕೆ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಕಾರು ಕಂಪೆನಿಯಾದ ಸೆಡಾನ್ ಸಂಸ್ಥೆ ಕೇಂದ್ರ ಸರ್ಕಾರದ ಮುಂದೆ ಬರೊಬ್ಬರಿ 10 ಸಾವಿರ ಬ್ಯಾಟರಿ ಚಾಲಿತ ಸೆಡಾನ್ ಕಾರುಗಳನ್ನು ಪೂರೈಕೆ ಮಾಡುವ ಪ್ರಸ್ತಾವವನ್ನು ಮುಂದಿಟ್ಟಿದೆ.

ಮಾಲಿನ್ಯ ರಹಿತ ಮತ್ತು ಪೆಟ್ರೋಲ್ ಡೀಸೆಲ್ ಇಂಧನ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಎನರ್ಜಿ ಎಫೀಶಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಂಧನ ದಕ್ಷತೆ ಸೇವೆಗಳು) ಎಂಬ ಸಂಸ್ಥೆ ಈ ಸಂಬಂಧ  ಜಾಗತಿಕ ಟೆಂಡರ್ ಕರೆದಿದ್ದು, ಖ್ಯಾತ ಬ್ಯಾಟರಿ ಚಾಲಿತ ಕಾರುಗಳ ತಯಾರಿಕಾ ಸಂಸ್ಥೆ ಸೆಡಾನ್ ಶುಕ್ರವಾರ ತನ್ನ ಪ್ರಸ್ತಾವ ಮನವಿ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಅದರಂತೆ ಸೆಡಾನ್ ಸಂಸ್ಥೆ ಕೇಂದ್ರ ಸಚಿವರು ಸಂಚರಿಸಲು  ಅತ್ಯಾಧುನಿಕ ವಿದ್ಯುತ್ ಚಾಲಿತ ಕಾರುಗಳನ್ನು ನೀಡುವುದಾಗಿ ತನ್ನ ಪ್ರಸ್ತಾವದಲ್ಲಿ ತಿಳಿಸಿದೆ. ಮೂಲಗಳ ಪ್ರಕಾರ ಪ್ರಾಥಮಿಕ ಹಂತದಲ್ಲಿ ಸೆಡಾನ್ ಸಂಸ್ಥೆ ಸುಮಾರು 10 ಸಾವಿರ ಬ್ಯಾಟರಿ ಚಾಲಿತ ಕಾರುಗಳನ್ನು ಪೂರೈಕೆ ಮಾಡಲು  ನಿರ್ಧರಿಸಿದ್ದು, ಇದಲ್ಲದೆ 4,000 ಚಾರ್ಜಿಂಗ್ ಸ್ಟೇಷನ್ ಪೂರೈಸುವ ಮಹತ್ವದ ಪ್ರಸ್ತಾವ ಸರ್ಕಾರದ ಮುಂದಿಟ್ಟಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಕಲ್ಲಿದ್ದಲು ಮತ್ತು ಪುನರ್ಬಳಕೆ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್  ಅವರು, "ಸರ್ಕಾರಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಾವು ವಿದ್ಯುತ್ ಕಾರು ಪ್ರಚುರಪಡಿಸಲು ಕಾರ್ಯ  ಆರಂಭಿಸಲಿದ್ದೇವೆ" ಎಂದು ಹೇಳಿದ್ದಾರೆ. ಎಸ್ಸೆಲ್ ಸಂಸ್ಥೆ ಎಲ್‌ಇಡಿ ಬಲ್ಬ್‌ಗಳನ್ನು ಪೆಟ್ರೋಲ್ ಬಂಕ್‌ ಗಳಲ್ಲಿ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಮಾಡಿದ ಬಳಿಕ ಸಚಿವರು ಈ ಹೇಳಿಕೆ ನೀಡಿದರು.

ಮೂಲಗಳ ಪ್ರಕಾರ ಮೊದಲ ಹಂತದಲ್ಲಿ ಸೆಡಾನ್ ಕಂಪೆನಿಯಿಂದ ಕೇಂದ್ರ ಸರ್ಕಾರ 1000 ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲಿದ್ದು, ಮೊದಲ ಆರು ತಿಂಗಳಲ್ಲಿ ಈ ಕಾರುಗಳ ಪೂರೈಕೆಯಾಗಲಿದೆ. ಈ ಕಾರುಗಳ ವಿಶೇಷವೆಂದರೆ  ಇದು ಒಮ್ಮೆ ಚಾರ್ಜ್ ಮಾಡಿದರೆ 120-150 ಕಿಲೋಮೀಟರ್ ಕ್ರಮಿಸುತ್ತದೆ ಎಂದು ಹೇಳಲಾಗಿದೆ.

ತಜ್ಞರು ಅಭಿಪ್ರಾಯಪಟ್ಟಿರುವಂತೆ ವಿದ್ಯುತ್ ಚಾಲಿತ ಕಾರು 120-150 ಕಿಲೋಮೀಟರ್ ದೂರ ಕ್ರಮಿಸಲು 30 ಕಿಲೋ ವ್ಯಾಟ್ ವಿದ್ಯುತ್ ಅವಶ್ಯಕತೆ ಇದ್ದು, ಈ 30 ಕಿಲೋ ವ್ಯಾಟ್ ವಿದ್ಯುತ್ ಬ್ಯಾಟರಿ ಚಾರ್ಜಿಂಗ್ ಗೆ ಪ್ರತೀ ತಿಂಗಳು  2500ರಿಂದ 3200ರುಗಳ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ ಸಚಿವರು ಬಳುಸುತ್ತಿರುವ ಕಾರುಗಳ ಪ್ರತೀ ತಿಂಗಳ ಡೀಸೆಲ್ ಖರ್ಚಿಗೆ ಹೋಲಿಕೆ ಮಾಡಿದರೆ ಈ ವೆಚ್ಚ ತೀರ ಅಗ್ಗ ಎಂದು ಹೇಳಲಾಗುತ್ತಿದೆ.

ಇನ್ನು ಬಗ್ಗೆ ಮಾತನಾಡಿರುವ ಎಸ್ಸೆಲ್ ವ್ಯವಸ್ಥಾಪಕ ನಿರ್ದೆಶಕ ಸೌರಭ್ ಕುಮಾರ್ ಅವರು, ನವೆಂಬರ್ ವೇಳೆಗೆ 300-400 ಇಂಥ ಕಾರುಗಳನ್ನು ಖರೀದಿಸಲಿದ್ದೇವೆ. ಎಲ್ಲ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಇವುಗಳನ್ನು  ನೀಡಲಾಗುತ್ತದೆ. ಇಂಥ ವಿದ್ಯುತ್ ವಾಹನ, ಚಾಲಕ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಈ ಮೂಲಕ ಮಾಸಿಕ 5,000 ರೂಪಾಯಿಗಿಂತಲೂ ಕಡಿಮೆ ದರದಲ್ಲಿ ಈ ಸೇವೆ ನೀಡಲು ಸಾಧ್ಯವಾಗಲಿದೆ. ಇದು ಮಾಲಿನ್ಯ  ನಿಯಂತ್ರಣದಲ್ಲೂ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com