ಛತ್ತೀಸ್ಗಢ: ಬಿಜೆಪಿ ನಾಯಕನ ಮಾಲೀಕತ್ವದ ಗೋಶಾಲೆಯಲ್ಲಿ 150 ಹಸುಗಳ ಸಾವು

ಬಿಜೆಪಿ ನಾಯಕನ ಮಾಲೀಕತ್ವದಲ್ಲಿ ನಡೆಸಲಾಗುತ್ತಿದ್ದ ಗೋಶಾಲೆಯೊಂದರಲ್ಲಿ ಸೂಕ್ತ ಆರೈಕೆ ಹಾಗೂ ಹಸಿವಿನಿಂದಾಗಿ 150 ಹಸುಗಳು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ...
ಛತ್ತೀಸ್ಗಢ: ಬಿಜೆಪಿ ನಾಯಕನ ಮಾಲೀಕತ್ವದ ಗೋಶಾಲೆಯಲ್ಲಿ 150 ಹಸುಗಳ ಸಾವು
ಛತ್ತೀಸ್ಗಢ: ಬಿಜೆಪಿ ನಾಯಕನ ಮಾಲೀಕತ್ವದ ಗೋಶಾಲೆಯಲ್ಲಿ 150 ಹಸುಗಳ ಸಾವು
ರಾಯ್ಬುರ; ಬಿಜೆಪಿ ನಾಯಕನ ಮಾಲೀಕತ್ವದಲ್ಲಿ ನಡೆಸಲಾಗುತ್ತಿದ್ದ ಗೋಶಾಲೆಯೊಂದರಲ್ಲಿ ಸೂಕ್ತ ಆರೈಕೆ ಹಾಗೂ ಹಸಿವಿನಿಂದಾಗಿ 150 ಹಸುಗಳು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. 
ಛತ್ತೀಸ್ಗಢ ದುರ್ಗ್ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಗೋಶಾಲೆಯಲ್ಲಿ ಒಟ್ಟು 150 ಹಸುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. 
ಗೋಶಾಲೆಯಲ್ಲಿ ಹಸುಗಳಉ ಸಾವನ್ನಪ್ಪುತ್ತಿರುವುದಾಗಿ ಕೆಲ ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಬಳಿ ದೂರು ನೀಡಿದ್ದರು. ದೂರಿನ ಅನ್ವಯ ಜಿಲ್ಲಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಶ್ ಪಾತ್ರೆಯವರು ಬಿಜೆಪಿ ನಾಯಕ ಹರೀಶ್ ವರ್ಮಾ ಪಾತ್ರೆ ಮಾಲೀಕತ್ವದ ಗೋಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಹಸಿವು ಹಾಗೂ ಸೂಕ್ತ ಆರೈಕೆಗಳಿಲ್ಲದೆಯೇ 150 ಹಸುಗಳು ಸಾವನ್ನಪ್ಪಿವೆ ಎಂದು ದೃಢೀಕರಿಸಿದ್ದಾರೆ. 
ಪ್ರಕರಣ ಸಂಬಂಧ ತನಿಖೆಗಾಗಿ ಪ್ರಾಣಿ ಸಂಗೋಪನೆಯ ಉಪ ನಿರ್ದೇಶಕರ ನೇತೃತ್ವದಲ್ಲಿ ನಾಲ್ಕು ಸದಸ್ಯರ ತಂಡವೊಂದನ್ನು ನೇಮಿಸಲಾಗಿದೆ. ಹಸುಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಹಸುಗಳ ಮಾರಣಹೋಮಕ್ಕೆ ಕಾರಣ ತಿಳಿದುಬರಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com