ಅಗರ್ತಲಾ: ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಕರೆ ಒಡ್ಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಫೇಸ್ ಬುಕ್ ಪೋಸ್ಟ್ ಮೂಲಕ ರಿಯಾ ರಾಯಾ ಎಂಬಾತ ವರ್ಲ್ಡ್ ಆ್ಯಂಟಿ ಕಮ್ಯುನಿಸ್ಟ್ ಆಫ್ ಕೌನ್ಸಿಲ್ ಮೂಲಕ ಬೆದರಿಕೆ ಹಾಕಿದ್ದಾನೆ. ಮಾಣಿಕ್ ಸರ್ಕಾರ್ ಅವರನ್ನು ಕೊಂದವರಿಗೆ 5 ಲಕ್ಷ ರು ನೀಡುವುದಾಗಿ ಘೋಷಿಸಿದ್ದಾನೆ.
ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಇದೊಂದು ನಕಲಿ ಹೆಸರಿನ ಫೇಸ್ ಬುಕ್ ಖಾತೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.