ಫೈವ್ ಸ್ಟಾರ್ ಹೋಟೆಲ್- ಪಿಎಸ್ ಯು ಕಾರುಗಳಿಂದ ದೂರವಿರಿ: ಸಚಿವರುಗಳಿಗೆ ಮೋದಿ ಎಚ್ಚರಿಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಸಂಪುಟ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಪಂಚಾತಾರ ಹೋಟೆಲ್ ಮತ್ತು ಲಕ್ಷುರಿ ಕಾರುಗಳಿಂದ ದೂರವಿರಿ ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಸಂಪುಟ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಪಂಚತಾರ ಹೋಟೆಲ್ ಮತ್ತು ಸರ್ಕಾರಿ ಕಾರುಗಳಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ.
ಕೆಲ ಸಚಿವರುಗಳು ಅಧಿಕೃತ ಕೆಲಸದಲ್ಲಿರುವ ವೇಳೆ ಸರ್ಕಾರದಿಂದ ವಸತಿ ವ್ಯವಸ್ಥೆಯಿದ್ದರೂ ಅದನ್ನು ಬಿಟ್ಟು ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ, ಇದಕ್ಕೆ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇನ್ನೂ ಕೆಲವು ಸಚಿವರು ವಯಕ್ತಿಕ ಕೆಲಸಗಳಿಗಾಗಿ ಸರ್ಕಾರ ಇಲಾಖೆಯಡಿ ನೀಡಿರುವ ವಾಹನಗಳನ್ನು ಬಳಸುತ್ತಿರುವ ಬಗ್ಗೆ ಮೋದಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇಂಥಹ ದುರುಪಯೋಗವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. 
ಸರ್ಕಾರದ ಅಧಿಕೃತ ಕೆಲಸಗಳಿಗೆ ಹೊರತು ಪಡಿಸಿ ವಯಕ್ತಿಕ ಕೆಲಸಗಳಿಗೆ ಬಳಸಬಾರದೆಂದು ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ. ಯಾವುದೇ ಕಾರಣಕ್ಕೂ ಆಡಳಿತದಲ್ಲಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಕೂಡ ಎಚ್ಚರಿಸಿದ್ದಾರೆ. 
ಈ ಮೊದಲು ಆಡಳಿತ ವರ್ಗ ಫರ್ಸ್ಟ್ ಕ್ಲಾಸ್ ಪ್ರಯಾಣ ಮತ್ತು ಪಂಚತಾರ ಹೊಟೇಲ್ ಗಳಲ್ಲಿ ಸಭೆ ನಡೆಸುವುದಕ್ಕೆ ಮೋದಿ ಸರ್ಕಾರ ನಿಷೇಧ ಹೇರಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com