ಉತ್ಕಲ್ ಎಕ್ಸ್'ಪ್ರೆಸ್ ರೈಲು ದುರಂತ: ಸಂಜೆಯೊಳಗೆ ತಪ್ಪಿತಸ್ಥರ ಪತ್ತೆ ಹಚ್ಚಿ- ಅಧಿಕಾರಿಗಳಿಗೆ ರೈಲ್ವೇ ಸಚಿವ

ಉತ್ತರಪ್ರದೇಶದಲ್ಲಿ ಸಂಭವಿಸಿದ ಉತ್ಕಲ್ ಎಕ್ಸ್'ಪ್ರೆಸ್ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆಯೊಳಗೆ ತಪ್ಪಿತಸ್ಥರು ಯಾರು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈಲ್ವೇ ಮಂಡಳಿ ಅಧ್ಯಕ್ಷರಿಗೆ ಕೇಂದ್ರ ರೈಲ್ವೆ ಸಚಿವ ಸುರೇಶ್...
ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು
ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು

ನವದೆಹಲಿ: ಉತ್ತರಪ್ರದೇಶದಲ್ಲಿ ಸಂಭವಿಸಿದ ಉತ್ಕಲ್ ಎಕ್ಸ್'ಪ್ರೆಸ್ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆಯೊಳಗೆ ತಪ್ಪಿತಸ್ಥರು ಯಾರು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈಲ್ವೇ ಮಂಡಳಿ ಅಧ್ಯಕ್ಷರಿಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಭಾನುವಾರ ಆದೇಶಿಸಿದ್ದಾರೆ. 

ಉತ್ಕಲ್ ಎಕ್ಸ್'ಪ್ರೆಸ್ ರೈಲು ದುರಂತ ಪ್ರಕರಣ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಟ್ವೀಟ್ ಮಾಡಿರುವ ಅವರು, ಕಾರ್ಯಾಚರಣೆ ವೇಳೆ ರೈಲ್ವೇ ಮಂಡಳಿಯ ಅಜಾಗರೂಕತೆಯನ್ನು ಸಹಿಸುವುದಿಲ್ಲ. ಪ್ರಕರಣ ಸಂಬಂಧ ಈಗಾಗಲೇ ಸಿಆರ್'ಬಿ (ರೈಲ್ವೇ ಮಂಡಳಿ ಅಧ್ಯಕ್ಷರು) ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇಂದು ಸಂಜೆಯೊಳಗೆ ತಪ್ಪಿತಸ್ಥರು ಯಾರು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

ಅಪಘಾತಕ್ಕೀಡಾದ 7 ಬೋಗಿಗಳನ್ನು ಈಗಾಗಲೇ ಸ್ಥಳದಿಂದ ತೆರವುಗೊಳಿಸಲಾಗಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಕರಣ ಸಂಬಂಧ ಖುದ್ದಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇನೆಂದು ತಿಳಿಸಿದ್ದಾರೆ. 

ಈಗಾಗಲೇ ಪ್ರಾಥಮಿಕ ತನಿಖೆ ನಡೆಸುತ್ತಿದ್ದು, ಈ ಮಾಹಿತಿಯನ್ವಯ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com