ಹೊಸದಿಲ್ಲಿ: ಭಾರತೀಯ ಮೂಲದ ಜನರು (ಪಿಐಒಗಳು) ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅಭಿಯಾನ ನಡೆಸಿದರೆ, ಅವರು ತಮ್ಮ ವೀಸಾ ನೀತಿಯನ್ನು ಉಲ್ಲಂಘಿಸಿದಂತಾಗುತ್ತದೆಯೆ?
ಭಾರತೀಯ ಚುನಾವಣೆಗಳಲ್ಲಿ ಪ್ರಚಾರ ಮಾಡುವವರ ಬಗ್ಗೆ ಚುನಾವಣಾ ಕಾನೂನಿನಲ್ಲಿ ಸ್ಪಷ್ಠತೆ ಇರದ ಕಾರಣದಿಂದ ಕೇಂದ್ರ ಚುನಾವಣಾ ಆಯೋಗವು ಕಾನೂನು ಸಚಿವಾಲಯಕ್ಕೆ ಈ ಪ್ರಶ್ನೆಯನ್ನು ಒಡ್ಡಿದೆ.
ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಹಲವಾರು ಪಿಐಓಗಳು ಎಎಪಿಯ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಾಗ, ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಪಿಐಓಗಳು ಹಾಗೆ ಮಾಡಬಹುದೆ ಎಂಬ ಬಗ್ಗೆ ಆಯೋಗದೊಡನೆ ಪ್ರಶ್ನೆಯೊಂದನ್ನು ಎತ್ತಿದ್ದರು.
ಚುನಾವಣೆ ಕಾನೂನು ಭಾರತೀಯ ಚುನಾವಣೆಯಲ್ಲಿ ಯಾರು ಪ್ರಚಾರ ಮಾಡಬಹುದು ಎಂಬುದರ ಬಗ್ಗೆ ಮೌನವಾಗಿದೆ.
"ಈ ವಿಷಯದಲ್ಲಿ ಯಾವುದೇ ಪಕ್ಷದಿಂದ ಯಾವುದೇ ದೂರು ಸಹ ದಾಖಲಾಗಿಲ್ಲ.ಆದರೆ ಇಂದಿನ ಹೊಸ ಪರಿಸ್ಥಿತಿಯಾಗಿ ಈ ಪ್ರಶ್ನೆ ಮುನ್ನಲೆಗೆ ಬಂದಿದೆ. ಚುನಾವಣಾ ನಿಯಮಗಳ ಪ್ರತಿನಿಧಿಯು ಈ ವಿಷಯದ ಬಗ್ಗೆ ಮೌನವಾಗಿರುವುದರಿಂದ, ಆಯೋಗವು ವಿದೇಶಾಂಗ ಸಚಿವಾಲಯದಿಂದ ಸ್ಪಷ್ಠನೆಯನ್ನು ಕೇಳಿದೆ.
"ಕಾನೂನು ಸಚಿವಾಲಯದ ಪ್ರತಿಕ್ರಿಯೆ ಪಡೆಯಲು ಎಂ ಎಫ್ ಎ ಇದನ್ನು ಕೇಳಿದೆ" ಎಂದು ಚುನಾವಣಾ ಆಯೋಗ ಮತ್ತು ಸರ್ಕಾರದ ನಡುವಿನ ಪತ್ರವ್ಯವಹಾರದ ಬಗ್ಗೆ ಸರ್ಕಾರದ ಕಾರ್ಯಕರ್ತರು ತಿಳಿಸಿದರು.