ನಿನ್ನೆಯಷ್ಟೇ ಕಾಶ್ಮೀರ ಕುರಿತಂತೆ ಮಾತನಾಡಿದ್ದ ರಾಜನಾಥ ಸಿಂಗ್ ಅವರು, ಎನ್ಐಎ ಕಾರ್ಯಾಚರಣೆಗಳಿಂದಾಗಿ ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿದೆ. ದೇಶದ ಭದ್ರತೆಗೆ ನಾವು ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದು, ಇದಕ್ಕಾಗಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈಗಾಗಲೇ ನಾವು ಹಲವು ಸವಾಲುಗಳನ್ನು ಸ್ವೀಕರಿಸಿದ್ದು, ಕಳೆದ ಮೂರು ವರ್ಷಗಳಿಂದ ನಕ್ಸಲ್, ಭಯೋತ್ಪಾದನೆ ಮತ್ತು ಉಗ್ರ ವಾದಗಳು ಕಡಿಮೆಯಾಗಿದೆ ಎಂದು ಹೇಳಿದ್ದರು.