ನೋಟು ನಿಷೇಧ ಕುರಿತು ಜೇಟ್ಲಿ ಹೇಳಿಕೆ: ಸಾಕ್ಷಿ ನೀಡುವಂತೆ ಕಾಂಗ್ರೆಸ್ ಆಗ್ರಹ

ನೋಟು ನಿಷೇಧ ಕ್ರಮದಿಂದ ಜಮ್ಮು- ಕಾಶ್ಮೀರದ ಪ್ರತ್ಯೇಕವಾದಿಗಳು ಹಾಗೂ ಮಾವೋವಾದಿಗಳಿಗೆ ಸರಬರಾಜಾಗುತ್ತಿದ್ದ ಹಣಕ್ಕೆ ಬ್ರೇಕ್ ಬಿದ್ದಿದ್ದು, ಹಣದ ಕೊರತೆಯಿಂದಾಗಿ ಪ್ರತ್ಯೇಕತಾವಾದಿಗಳು ಒದ್ದಾಡುವಂತಾಗಿದೆ ಎಂಬ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರ...
ರಕ್ಷಣಾ ಸಚಿವ ಅರುಣ್ ಜೇಟ್ಲಿ
ರಕ್ಷಣಾ ಸಚಿವ ಅರುಣ್ ಜೇಟ್ಲಿ
ನವದೆಹಲಿ: ನೋಟು ನಿಷೇಧ ಕ್ರಮದಿಂದ ಜಮ್ಮು- ಕಾಶ್ಮೀರದ ಪ್ರತ್ಯೇಕವಾದಿಗಳು ಹಾಗೂ ಮಾವೋವಾದಿಗಳಿಗೆ ಸರಬರಾಜಾಗುತ್ತಿದ್ದ ಹಣಕ್ಕೆ ಬ್ರೇಕ್ ಬಿದ್ದಿದ್ದು, ಹಣದ ಕೊರತೆಯಿಂದಾಗಿ ಪ್ರತ್ಯೇಕತಾವಾದಿಗಳು ಒದ್ದಾಡುವಂತಾಗಿದೆ ಎಂಬ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದ್ದು, ಹೇಳಿಕೆ ಕುರಿತಂತೆ ಸಾಕ್ಷಿ ನೀಡುವಂತೆ ಸೋಮವಾರ ಆಗ್ರಹಿಸಿದೆ. 
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪಿ.ಸಿ. ಚಾಕೋ ಅವರು, ಯಾವುದೇ ಹೇಳಿಕೆ ನೀಡುವುದಕ್ಕೂ ಮುನ್ನ ರಕ್ಷಣಾ ಸಚಿವರು ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ಮಾತನಾಬೇಕು. ದೇಶದ ರಕ್ಷಣಾ ಸಚಿವರಾಗಿ ಆಧಾರವಿಲ್ಲದೆಯೇ ಊಹಾಪೋಹಾ ರೀತಿಯಲ್ಲಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಆಧಾರ ಹಾಗೂ ಸಾಕ್ಷಿಯಿಲ್ಲದೆಯೇ ಈ ರೀತಿಯ ಹೇಳಿಗಳನ್ನು ನೀಡಿದರೆ, ಜನರು ನಂಬುವುದಿಲ್ಲ ಎಂದು ಹೇಳಿದ್ದಾರೆ. 
ಭಾನುವಾರ ಮುಂಬೈನಲ್ಲಿ ಬಿಜೆಪಿ ಅಧ್ಯಕ್ಷ ಆಶಿಶ್‌ ಶೆಲರ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅರುಣ್ ಜೇಟ್ಲಿ, ನೋಟು ನಿಷೇಧ ಬಳಿಕ ಜಮ್ಮು-ಕಾಶ್ಮೀರದ ಪ್ರತ್ಯೇಕವಾದಿಗಳು ಹಾಗೂ ನಕ್ಸಲ್‌ ಪೀಡಿತ ರಾಜ್ಯಗಳಲ್ಲಿ  ನಡೆಯುತ್ತಿದ್ದ ವಿದ್ವಂಸಕ ಕೃತ್ಯಗಳು ಕಡಿಮೆಯಾಗಿದೆ. ಪ್ರತ್ಯೇಕವಾದಿಗಳು ಹಾಗೂ ಮಾವೋವಾದಿಗಳಿಗೆ ಸರಬರಾಜಾಗುತ್ತಿದ್ದ ಹಣಕ್ಕೆ ಬ್ರೇಕ್ ಬಿದ್ದಿದ್ದು, ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪ್ರತಿನಿತ್ಯ ಕಾಣುತ್ತಿದ್ದ ಪ್ರತಿಭಟನೆ, ಕಲ್ಲು ತೂರಾಟ  ಗಣನೀಯವಾಗಿ ಕಡಿಮೆಯಾಗಿದೆ, ನೋಟು ನಿಷೇಧಕ್ಕೂ ಮೊದಲು ಬೃಹತ್‌ ಸಂಖ್ಯೆಯಲ್ಲಿ ಕಲ್ಲು ತೂರಾಟಗಾರರ ಗುಂಪು ಕಾಣಿಸಿಕೊಳ್ಳುತ್ತಿತ್ತು. ಆದರೆ ಇದೀಗ ಆ ಸಂಖ್ಯೆಯಲ್ಲಿ ಗಣನೀಯ ಕಡಿಮೆಯಾಗಿದೆ. ಹೆಚ್ಚೆಂದರೆ 25 ಮಂದಿ  ಸೇರಿಕೊಂಡು ಕಲ್ಲುತೂರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com