ಪ್ರಜಾಪ್ರಭುತ್ವದಲ್ಲಿ 'ವಿಐಪಿ'ಯಂತಹ ಸಂಸ್ಕೃತಿಗೆ ಜಾಗವಿರುವುದಿಲ್ಲ: ಯೋಗಿ ಆದಿತ್ಯನಾಥ್

ಪ್ರಜಾಪ್ರಭುತ್ವದಲ್ಲಿ 'ವಿಐಪಿ'ಯಂತಹ ಸಂಸ್ಕೃತಿಗಳಿಗೆ ಜಾಗವಿರುವುದಿಲ್ಲ. ರಾಜ್ಯ ಸರ್ಕಾರ ಅಭಿವೃದ್ಧಿ ಮಂತ್ರವನ್ನು ಪ್ರತೀ ಕ್ಷೇತ್ರದಲ್ಲೂ ಅಭಿವೃದ್ಧಿಪಡಿಸಬೇಕೆಂದು...
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಸಹರಾನ್ಪುರ: ಪ್ರಜಾಪ್ರಭುತ್ವದಲ್ಲಿ 'ವಿಐಪಿ'ಯಂತಹ ಸಂಸ್ಕೃತಿಗಳಿಗೆ ಜಾಗವಿರುವುದಿಲ್ಲ. ರಾಜ್ಯ ಸರ್ಕಾರ ಅಭಿವೃದ್ಧಿ ಮಂತ್ರವನ್ನು ಪ್ರತೀ ಕ್ಷೇತ್ರದಲ್ಲೂ ಅಭಿವೃದ್ಧಿಪಡಿಸಬೇಕೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಹೇಳಿದ್ದಾರೆ. 

ಸಹರನ್ಪುರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿರುವ ಅವರು, ಉತ್ತರಪ್ರದೇಶ 5 ಜಿಲ್ಲೆಗಳಲ್ಲಿ ಮಾತ್ರ ವಿದ್ಯುತ್ ಸಂಪರ್ಕವಿದೆ. ಈ ಸತ್ಯ ಎಲ್ಲರಿಗೂ ತಿಳಿದಿರುವ ವಿಚಾರ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಿಐಪಿ ಸಂಸ್ಕೃತಿಗೆ ಯಾವುದೇ ಜಾಗವಿಲ್ಲ, ಯಾವುದೇ ತಾರತಮ್ಯವಿಲ್ಲ ಎಂದು ಹೇಳಿದ್ದೆವು. ಮುಖ್ಯಮಂತ್ರಿಗಳು ನೆಲೆಸಿರುವ ಪ್ರದೇಶದ ಸುತ್ತಮುತ್ತಲಿನಲ್ಲಿ ಮಾತ್ರ ವಿದ್ಯುತ್ ನೀಡಲಾಗುವುದಿಲ್ಲ. ಅಭಿವೃದ್ಧಿಯೇ ನಮ್ಮ ಸರ್ಕಾರ ಮೂಲಮಂತ್ರವಾಗಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಸಮಾಜವಾದಿ ಪಕ್ಷದ ವಿರುದ್ಧ ಕಿಡಿಕಾರಿರುವ ಅವರು, ಪೊಲೀಸ್ ಠಾಣೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಸಲುವಾಗಿ ಕೆಲವರು ರೂ.5 ಲಕ್ಷ ನೀಡಲಾಗುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಣವನ್ು ಆರೋಗ್ಯ ಕೇಂದ್ರಕ್ಕೋ ಅಥವಾ ಶೈಕ್ಷಣಿಕ ಕ್ಷೇತ್ರಕ್ಕೋ ನೀಡಿದಿದ್ದರೆ, ಉಪಯೋಗವಾಗುತ್ತಿತ್ತು ಹಾಗೂ ಪರಿಸ್ಥಿತಿಗಳೂ ಕೂಡ ಬದಲಾಗುತ್ತಿತ್ತು ಎಂದಿದ್ದಾರೆ. 

ಲಕ್ಷಾಂತರ ಮನೆಗಳಲ್ಲಿ ಇಂದು ವಿದ್ಯುತ್ ಸಂಪರ್ಕವಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಸರ್ಕಾರ ಸಾಮಾನ್ಯ ಜನರಿಗಾಗಿ, ರೈತರಿಗಾಗಿರುವ ಸರ್ಕಾರವಾಗಿದೆ. ರಾಜ್ಯದಲ್ಲಿ ಯಾವುದೇ ತಾರತಮ್ಯವಿಲ್ಲ. ರೈತರ ಸಾವನ್ನು ನಾವು ಮನ್ನ ಮಾಡಿದ್ದೇವೆ. ಜಾತಿ ಹಾಗೂ ಧರ್ಮದ ಆಧಾರ ಮೇಲೆ ಯಾವುದೇ ತಾರತಮ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com