ನವದೆಹಲಿ: ಕೇಂದ್ರ ಇಂಧನ ಸಚಿವ ಪೀಯೂಷ್ ಗೋಯಲ್ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಅಪ್ ಡೇಟ್ ಮಾಡಿದ್ದ ಫೋಟೊದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಬೀದಿ ದೀಪ ಯೋಜನೆಯ ಫೋಟೋಗೆ ರಷ್ಯಾದ ಬೀದಿಯ ದೀಪ ಹಾಕಿ ಪಿಯೂಷ್ ಗೋಯಲ್ ಎಡವಟ್ಟು ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದ್ದಂತೆಯೇ ಅದನ್ನು ಡಿಲೀಟ್ ಮಾಡಿದ್ದಾರೆ.
ಭಾರತದ 50,000 ಕಿ.ಮೀ ಯಷ್ಟು ರಸ್ತೆಗಳಲ್ಲಿ ಎಲ್ ಇಡಿ ದೀಪಗಳನ್ನು ಅಳವಡಿಸಿರುವ ಕೇಂದ್ರ ಸರ್ಕಾರದ ಸಾಧನೆಯನ್ನು ತಿಳಿಸುವುದಕ್ಕೆ ಟ್ವೀಟ್ ಮಾಡಿದ್ದ ಪೀಯೂಷ್ ಗೋಯಲ್, ಭಾರತದ ರಸ್ತೆಯ ಫೋಟೊ ಹಾಕುವುದರ ಬದಲು ರಷ್ಯಾದ ಫೋಟೊಗಳನ್ನು ಹಾಕಿದ್ದಾರೆ.
ಫೇಕ್ ನ್ಯೂಸ್ ನ್ನು ತೋರಿಸುವ ಉದ್ದೇಶದಿಂದಲೇ ಕಾರ್ಯನಿರ್ವಹಿಸುತ್ತಿರುವ SM Hoax Slayer ವೆಬ್ ಸೈಟ್ ನಲ್ಲಿ ಪಿಯೂಷ್ ಗೋಯಲ್ ಅವರ ಫೋಟೋ ರಷ್ಯಾದ್ದು ಎಂದು ಹೇಳಿದೆ.