ಸಾವಿರ ವರ್ಷಗಳಿಂದಲೂ ಸುನ್ನಿ ಮುಸ್ಲಿಮರಲ್ಲಿ ತ್ರಿವಳಿ ತಲಾಕ್ ಆಚರಣೆಯಲ್ಲಿದೆ: ಸಿಜೆಐ ಖೆಹರ್

ಸಾವಿರ ವರ್ಷಗಳಿಂದಲೂ ಮುಸ್ಲಿಮಕಲ್ಲಿ ತ್ರಿವಳಿ ತಲಾಕ್ ಪದ್ಧತಿ ಆಚರಣೆಯಲ್ಲಿದ್ದು, ತ್ರಿವಳಿ ತಲಾಖ್ ಸುನ್ನಿ ಮುಸ್ಲಿಂ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸಾವಿರ ವರ್ಷಗಳಿಂದಲೂ ಮುಸ್ಲಿಮಕಲ್ಲಿ ತ್ರಿವಳಿ ತಲಾಕ್ ಪದ್ಧತಿ ಆಚರಣೆಯಲ್ಲಿದ್ದು, ತ್ರಿವಳಿ ತಲಾಖ್ ಸುನ್ನಿ ಮುಸ್ಲಿಂ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದಾರೆ.

ಮುಸ್ಲಿಂ ಮಹಿಳೆಯರ ವಿರೋಧಕ್ಕೆ ಕಾರಣವಾಗಿದ್ದ ತ್ರಿವಳಿ ತಲಾಕ್ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆಯಾದರೂ, ಸೂಕ್ತ ಕಾನೂನು ಇಲ್ಲದ ಕಾರಣ ತ್ರಿವಳಿ ತಲಾಕ್ ದುರ್ಬಳಕೆಯಾಗುತ್ತಿದೆ ಎಂದು ಸಾಂವಿಧಾನಿಕ  ಪೀಠ ಅಭಿಪ್ರಾಯಪಟ್ಟಿದೆ. ತ್ರಿವಳಿ ತಲಾಕ್ ಸಂಬಂಧ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ತಮ್ಮ ಅಂತಿಮ ತೀರ್ಪು ನೀಡುವ ವೇಳೆ ಮಾತನಾಡಿದ ಸಿಜೆ ಐ ಖೆಹರ್ ಅವರು,  6 ತಿಂಗಳ ಕಾಲ ತ್ರಿವಳಿ ತಲಾಖ್ ಗೆ   ತಡೆಯಾಜ್ಞೆ ನೀಡಿ, ಈ ಆರು ತಿಂಗಳ ಕಾಲಾವಧಿಯಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸೂಕ್ತ ಕಾನೂನು ರಚಿಸಬೇಕು ಎಂದು  ಹೇಳಿದ್ದಾರೆ.

ಅಂತೆಯೇ ತ್ರಿವಳಿ ತಲಾಖ್ ನ ಸಿಂಧುತ್ವ ಎತ್ತಿಹಿಡಿದ ಮುಖ್ಯ ನ್ಯಾಯಮೂರ್ತಿ ಖೆಹರ್ ಅವರು, ತ್ರಿವಳಿ ತಲಾಖ್ ಸಂಬಂಧ ಸೂಕ್ತ ಕಾನೂನು ಇಲ್ಲದಿರುವುದರಿಂದ ಇದರ ದುರ್ಬಳಕೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ  ಕೂಡಲೇ ಸಂಸತ್ತಿನಲ್ಲಿ ಕಾನೂನು ರಚಿಸಬೇಕು ಎಂದು ಹೇಳಿದೆ. ಅಂತೆಯೇ ತ್ರಿವಳಿ ತಲಾಖ್ ಮುಸ್ಲಿಂ ವೈಯುಕ್ತಿಕ ಕಾನೂನು ಆಗಿದ್ದು, ನಾವು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ತ್ರಿವಳಿ ತಲಾಖ್  ಸಂವಿಧಾನದ ಕಲಂ  14,15,21 ಮತ್ತು 25ರ ಉಲ್ಲಂಘನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಂತೆಯೇ ತ್ರಿವಳಿ ತಲಾಖ್ ಸಂಬಂಧ ಸೂಕ್ತ ಕಾನೂನು ಇಲ್ಲದಿರುವುದರಿಂದ ಇದರ ದುರ್ಬಳಕೆಯಾಗುತ್ತಿದ್ದು, ಕೇಂದ್ರ ಸರ್ಕಾರ ಮತ್ತು ಸಂಸತ್ತು ಈ ಬಗ್ಗೆ ಸೂಕ್ತ ಕಾನೂನು ಜಾರಿಗೊಳಿಸಬೇಕು. ಮತ್ತು ರಾಜಕೀಯ ಪಕ್ಷಗಳನ್ನು  ರಾಜಕೀಯವನ್ನು ಪಕ್ಕಕ್ಕಿಟ್ಟು ಹೊಸ ಕಾನೂನು ರಚನೆಗೆ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹುದೇ ಅಭಿಪ್ರಾಯವನ್ನು ನ್ಯಾಯಮೂರ್ತಿ ನಜೀರ್ ಅವರೂ ಕೂಡ ವ್ಯಕ್ತಪಡಿಸಿದರು.

ಆದರೆ ಮುಖ್ಯ ನ್ಯಾಯಮೂರ್ತಿ ಖೆಹರ್ ಹಾಗೂ ನಜೀರ್ ಅವರ ಅಭಿಪ್ರಾಯವನ್ನು ತಳ್ಳಿ ಹಾಕಿದ ನ್ಯಾ.ನಾರಿಮನ್,  ಉದಯ್ ಲಲಿತ್ ಹಾಗೂ ಕುರಿಯನ್ ಅವರ ಪೀಠ ತ್ರಿವಳಿ ತಲಾಖ್ ಗೆ ಸಂವಿಧಾನ ಮಾನ್ಯತೆ ಇಲ್ಲ ಎಂದು  ಅಭಿಪ್ರಾಯಪಟ್ಟಿದೆ. ಆ ಮೂಲಕ ನ್ಯಾಯಾಧೀಶರ ಬಹುಮತದ ಆಧಾರದ ಮೇಲೆ ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com