ರಾಜೀವ್ ಹಂತಕನಿಗೆ ಪೆರೋಲ್: ಜಯಲಲಿತಾಗೆ ಕೃತಜ್ಞತೆ ಸಲ್ಲಿಸಿದ ಪೆರಾರಿವಾಲನ್ ತಾಯಿ

ಮಗನ ಬರುವಿಕೆಗಾಗಿ 27 ವರ್ಷಗಳ ಕಾಲ ಕಾದು ಕುಳಿತಿದ್ದ ದೇಶದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಂತಕರಲ್ಲಿ ಒಬ್ಬನಾದ ಎ.ಜಿ. ಪೆರಾರಿವಾಲನ್'ನ ತಾಯಿ ಅರ್ಪುತಮ್ ಅಮ್ಮಳ್ ಅವರು, ತಮಿಳುನಾಡು ಮಾಜಿ...
ಎ.ಜಿ. ಪೆರಾರಿವಾಲನ್'ನ ತಾಯಿ ಅರ್ಪುತಮ್ ಅಮ್ಮಳ್
ಎ.ಜಿ. ಪೆರಾರಿವಾಲನ್'ನ ತಾಯಿ ಅರ್ಪುತಮ್ ಅಮ್ಮಳ್
ಜೋಲಾರ್ಪೇಟೈ: ಮಗನ ಬರುವಿಕೆಗಾಗಿ 27 ವರ್ಷಗಳ ಕಾಲ ಕಾದು ಕುಳಿತಿದ್ದ ದೇಶದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಂತಕರಲ್ಲಿ ಒಬ್ಬನಾದ ಎ.ಜಿ. ಪೆರಾರಿವಾಲನ್'ನ ತಾಯಿ ಅರ್ಪುತಮ್ ಅಮ್ಮಳ್ ಅವರು, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 
ಕಳೆದ 26 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಪೆರಾರಿವಾಲನ್'ಗೆ ಪೆರೋಲ್ ಮೇಲೆ ಹೊರೆ ಬಿಡುವಂತೆ ಪೆರಾರಿವಾಲನ್ ಅವರ ತಾಯಿ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ, ಮೊದಲ ಬಾರಿಗೆ ಹಂತಕನೊಬ್ಬನಿಗೆ 30 ದಿನಗಳ ಕಾಲ ಜೈಲಿನಿಂದ ಮುಕ್ತನಾಗುವ ಅವಕಾಶವನ್ನು ನೀಡಿತ್ತು. 
ಪೆರೋಲ್ ನಿಂದ ಪುತ್ರ ಹೊರ ಬಂದಿರುವುದಕ್ಕೆ ಸಂಸತ ವ್ಯಕ್ತಪಡಿಸಿರುವ ತಾಯಿ ಅರ್ಪುತಮ್ ಅಮ್ಮಳ್ ಅವರು, 27 ವರ್ಷಗಳ ಸಂಕಷ್ಟಗಳ ಬಳಿಕ ನನ್ನ ಮಗ ಜೈಲಿನಿಂದ ಹೊರ ಬರುತ್ತಿದ್ದಾನೆ. ನನ್ನ ಸಂಕಷ್ಟಕ್ಕೆ ಸ್ಪಂದನೆ ನೀಡಿದ್ದ ದಿವಂಗತ ಜೆ.ಜಯಲಲಿತಾ ಅವರಿಗೆ ಹಾಗೂ ನನಗೆ ಸಹಾಯ ಮಾಡಿದ್ದ, ಬೆಂಬಲ ನೀಡಿದ್ದ ಜನತೆಗೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆಂದು ಹೇಳಿದ್ದಾರೆ. 
ನನಗೆ ಬೆಂಬಲ ನೀಡಿದ ಡಿಎಂಕೆ, ಎಂ.ಕೆ. ಸ್ಟಾಲಿನ್ ಹಾಗೂ ಎಲ್ಲಾ ರಾಜಕೀಯ ಪಕ್ಷಗಳಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮಗನು ತನ್ನ ಜೊತೆಗೆ ಜೀವನ ನಡೆಸಬೇಕೆಂದು ಪ್ರತೀ ತಾಯಿ ಆಸೆ ಪಡುತ್ತಾಳೆ. 27 ವರ್ಷಗಳ ಬಳಿಕ ನನಗೆ ಈ ಅವಕಾಶ ದೊರಕಿದೆ. ಜೆ. ಜಯಲಲಿತಾ ಅವರು ಎರಡು ಬಾರಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಪೆರೋಟ್ ದೊರಕುವುದು ನಿಧಾನವಾಗುತ್ತಿತ್ತು. ಆತ ಬಿಡುಗಡೆಯಾಗುವುದು ಸಾಧ್ಯವಾಗುತ್ತಿರಲಿಲ್ಲ. ಪೆರೋಟ್ ಬಗೆಗಿನ ಆಗ್ರಹಗಳನ್ನೇ ಬಿಟ್ಟಿಬಿಟ್ಟಿದ್ದೆವು. ಇದೀಗ ಪೆರೋಲ್ ಮೇಲೆ ನನ್ನ ಮಗ ಹೊರಬರುತ್ತಿದ್ದು, ಸಂತೋಷವಾಗುತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com