ಡಾರ್ಜಿಲಿಂಗ್ ಅಶಾಂತಿ: ಸರ್ಕಾರದೊಡನೆ ಮಾತುಕತೆಗೆ ಒಪ್ಪಿದ ಜಿಜೆಎಂ

ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಇಂದು ಬಂಗಾಳ ಸರ್ಕಾರದಿಂದ ಅಧಿಕೃತ ಆಮಂತ್ರಣವನ್ನು ಸ್ವೀಕರಿಸಿದ ನಂತರ, ಪಶ್ಚಿಮ ಬಂಗಾಳ ಸರ್ಕಾರವು ಆಗಸ್ಟ್ 29 ರಂದು ನಡೆಸಲು ಉದ್ದೇಶಿಸಿರುವ ಸಭೆಯಲ್ಲಿ ತಾನು ಭಾಗವಹಿಸುವುದಾಗಿ ಹೇಳಿದೆ.
ಡಾರ್ಜಿಲಿಂಗ್ ರಸ್ತೆಯಲ್ಲಿ ರ್ಯಾಲಿ ನಡೆ೩ಸುತ್ತಿರುವ ಜಿಜೆಎಂ ಕಾರ್ಯಕರ್ತರು
ಡಾರ್ಜಿಲಿಂಗ್ ರಸ್ತೆಯಲ್ಲಿ ರ್ಯಾಲಿ ನಡೆ೩ಸುತ್ತಿರುವ ಜಿಜೆಎಂ ಕಾರ್ಯಕರ್ತರು
ಡಾರ್ಜಲಿಂಗ್: ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಇಂದು ಬಂಗಾಳ ಸರ್ಕಾರದಿಂದ ಅಧಿಕೃತ ಆಮಂತ್ರಣವನ್ನು ಸ್ವೀಕರಿಸಿದ ನಂತರ, ಪಶ್ಚಿಮ ಬಂಗಾಳ ಸರ್ಕಾರವು ಆಗಸ್ಟ್ 29 ರಂದು ನಡೆಸಲು ಉದ್ದೇಶಿಸಿರುವ ಸಭೆಯಲ್ಲಿ ತಾನು ಭಾಗವಹಿಸುವುದಾಗಿ ಹೇಳಿದೆ.

"ನಾವು ಕಳೆದ ರಾತ್ರಿ ಸರ್ಕಾರದ ಆಹ್ವಾನವನ್ನು ಸ್ವೀಕರಿಸಿದ್ದೇವೆ ಆದ್ದರಿಂದ ಜಿಜೆಎಂ ಸಭೆಯಲ್ಲಿ ಭಾಗವಹಿಸಲಿದೆ" ಸರ್ಕಾರದ ಜತೆಗಿನ  ಮಾತುಕತೆಗಳಿಗೆ ಜಿ.ಜೆ.ಎಂ ನಾಯಕರ ನಿಯೋಗ ಹಾಜರಾಗಲಿದೆ ಎಂದು ನಿಯೋಗದ ಸದಸ್ಯರಾಗಿರುವ ಜಿಜೆಎಂ ಎಂಎಲ್ಎ ಮತ್ತು ಹಿರಿಯ ನಾಯಕ ಅಮರ್ ಸಿಂಗ್ ರೈ ಅವರು ಪಿಟಿಐಗೆ ತಿಳಿಸಿದ್ದಾರೆ.

ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕಾಗಿ ಡಾರ್ಜಲಿಂಗ್ ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಮುಷ್ಕರ ಇಂದು ತನ್ನ 73 ನೇ ದಿನಕ್ಕೆ ಕಾಲಿಟ್ಟಿದೆ.

ಮಾತುಕತೆಗೆ ಹಾಜರಾಗಲು ಜಿಜೆಎಂ ಸೇರಿದಂತೆ ವಿವಿಧ ಪಕ್ಷಗಳಿಗೆ ನಾವು ಪತ್ರಗಳನ್ನು ಕಳುಹಿಸಿದ್ದೇವೆ.ಜಾಪ್, ಜಿಎನ್ಎಲ್ಎಫ್, ಎಬಿಜಿಎಲ್ ಮತ್ತು ಇತರ ಅನೇಕ ಪಕ್ಷಗಳನ್ನು  ಮಾತುಕತೆಗಳಿಗೆ ಆಹ್ವಾನಿಸಲಾಗಿದೆ." ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮಾತುಕತೆಗಳಿಗೆ ಹಾಜರಾಗಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ ಜಿಜೆಎಂ ಅವರು ಅಧಿಕೃತವಾಗಿ ಆಹ್ವಾನಿಸಬೇಕೆಂದು ಪೂರ್ವ ಷರತ್ತು ವಿಧಿಸಿತ್ತು. ಪರ್ವತ ಪ್ರದೇಶಗಳಲ್ಲಿ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಮಾತುಕತೆಗೆ ಕೋರಿ ಜಿಎನ್ ಎಲ್ ಎಫ್ ಪತ್ರ  ಬರೆದಿತ್ತು  ಅದಕ್ಕೆ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರ ಆಗಸ್ಟ್ 29 ರಂದು ಮಾತುಕತೆಗೆ  ಆಹ್ವಾನ ನೀಡಿದೆ.

"ನಾವು ಈಗ ಆಹ್ವಾನಿಸಲ್ಪಟ್ಟಂತೆ ಮಾತುಕತೆಗಳಿಗೆ ಹಾಜರಾಗಲು ಯಾವುದೇ ಅಡ್ಡಿ ಇಲ್ಲ" ಎಂದು ಹಿರಿಯ ಜಿಜೆಎಂ ನಾಯಕ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com