ಶ್ರೀನಗರ: ಭಾರತದ ಗಡಿ ರಕ್ಷಣಾ ಪಡೆ(ಬಿಎಸ್ಎಫ್)ಯ ಯೋಧರು ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನದ ಮೂವರು ಸೈನಿಕರನ್ನು ಶನಿವಾರ ಹತ್ಯೆ ಮಾಡಿದ್ದಾರೆ.
ಜಮ್ಮು ಪ್ರಾಂತ್ಯದ ರಾಜೋರಿ ಜಿಲ್ಲೆಯ ಸುಂದರಬನಿ ಸೆಕ್ಟರ್ ನಲ್ಲಿ ಬಿಎಸ್ಎಫ್ ಪೋಸ್ಟ್ ಅನ್ನು ಗುರಿ ಮಾಡಿಕೊಂಡು ಗುಂಡಿನ ದಾಳಿ ನಡೆಸುತ್ತಿದ್ದ ಮೂವರು ಪಾಕ್ ಸೈನಿಕರನ್ನು ಭಾರತೀಯ ಯೋಧರು ಹತ್ಯೆ ಮಾಡಿರುವುದಾಗಿ ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ಪಾಕ್ ಸೈನಿಕರು ಸುಂದರಬನಿ ಸೆಕ್ಟರ್ ನಲ್ಲಿ ಬಿಎಸ್ ಎಫ್ ಪೋಸ್ಟ್ ಮತ್ತು ನಾಗರಿಕರನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದರು. ಅದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅವರು ಹೇಳಿದ್ದಾರೆ.