ಸಿಬಿಐ ಕೇಂದ್ರ ಕಛೇರಿ
ಸಿಬಿಐ ಕೇಂದ್ರ ಕಛೇರಿ

ಶ್ರೀಜನ್ ಹಗರಣ: ಸಿಬಿಐ ನಿಂದ ಎಫ್ಐಆರ್ ದಾಖಲು

ಬಿಹಾರದ ಭಾಗಲ್ಪುರ ಮೂಲದ ಸರ್ಕಾರೇತರ ಸಂಘಟನೆಯ ಖಾತೆಗಳಿಗೆ ಸರಕಾರದ ಹಣವನ್ನು ವರ್ಗಾವಣೆ ಮಾಡಿರುವ ಆರೋಪವನ್ನು ಒಳಗೊಂಡಂತೆ ಶ್ರೀಜನ್ ಮಹಿಳಾ ವಿಕಾಸ್ ಸಮಿತಿಯ ಭಾಗಲ್ಪುರ ಮೂಲದ ಎನ್ ಜಿಓ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದೆ.
ಪಾಟ್ನಾ: ಬಿಹಾರದ ಭಾಗಲ್ಪುರ ಮೂಲದ ಸರ್ಕಾರೇತರ ಸಂಘಟನೆಯ ಖಾತೆಗಳಿಗೆ ಸರಕಾರದ ಹಣವನ್ನು ವರ್ಗಾವಣೆ ಮಾಡಿರುವ ಆರೋಪವನ್ನು ಒಳಗೊಂಡಂತೆ ಶ್ರೀಜನ್ ಮಹಿಳಾ ವಿಕಾಸ್ ಸಮಿತಿಯ ಭಾಗಲ್ಪುರ ಮೂಲದ ಎನ್ ಜಿಓ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದೆ.
ಬ್ಯಾಂಕ್ ಆಫ್ ಬರೋಡಾ (ಭಾಗಲ್ಪುರ್) ಮಾಜಿ ನಿರ್ದೇಶಕ, ಭೂ ಸ್ವಾಧೀನ ಕಛೇರಿ (ಸಹರ್ಸಾ) ಯ ಮಾಜಿ ಕ್ಯಾಷಿಯರ್ ಮತ್ತು ಮುಖ್ಯಸ್ಥ, ಮತ್ತು ಬ್ಯಾಂಕ್ ಆಫ್ ಬರೋಡಾ ನಿರ್ದೇಶಕ (ಸಹರ್ಸಾ) ರ ವಿರುದ್ಧ ಸಹ ಎಫ್ಐಆರ್ ದಾಖಲಿಸಲಾಗಿದೆ.
ಸುಮಾರು 10 ಎಫ್ಐಆರ್‌ಗಳನ್ನು ದಾಖಲಿಸಿದ್ದ ಕೇಂದ್ರ ತನಿಖಾ ದಳದ ಈ ಕೇಸುಗಳ ತನಿಖೆಯನ್ನು  ಈ ಹಿಂದೆ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ ನಡೆಸುತ್ತಿತ್ತು. 
ರಾಜ್ಯ ಸರಕಾರದ ಕೋರಿಕೆಯ ಮೇರೆಗೆ  ಹಗರಣದ ತನಿಖೆಯನ್ನು ಇದೀಗ ಸಿಬಿಐ ಕೈಗೆತ್ತಿಕೊಂಡಿದೆ. ತನಿಖಾ ನಿಯಮಗಳ ಪ್ರಕಾರ ಸಿಬಿಐ, ಇದೀಗ ಹೊಸ ಎಫ್ಐಆರ್‌ ಗಳನ್ನು ದಾಖಲಿಸುತ್ತದೆ.  ಇಲ್ಲವೇ ಅವುಗಳ ಸಾರಾಂಶವನ್ನು ತನ್ನ ಅಂತಿಮ ವರದಿಯಲ್ಲಿ ಅಥವಾ ಗುಪ್ತ ವರದಿಯಲ್ಲಿ  ಉಲ್ಲೇಖೀಸುತ್ತದೆ. 
ಪ್ರಿಯಾ ಕುಮಾರ್‌ ಅವರು ಈ ವರ್ಷದ ಆದಿಯಲ್ಲಿ  ನಿಧನ ಹೊಂದಿದ ಎನ್‌ಜಿಓ ಸ್ಥಾಪಕಿ ಮನೋರಮಾ ದೇವಿ ಅವರ ಸೊಸೆ. ಮನೋರಮಾ ದೇವಿ ನಿಧನಾನಂತರ ಪ್ರಿಯಾ ಅವರು ಈ ಎನ್‌ಜಿಓ ಸಂಘಟನೆಯನ್ನು ನಡೆಸುತ್ತಿದ್ದರು. 

Related Stories

No stories found.

Advertisement

X
Kannada Prabha
www.kannadaprabha.com