ಗೋರಕ್ ಪುರ ಬಳಿಕ ಜಾರ್ಖಂಡ್ ಸರದಿ: ಜೆಮ್ ಶೆಡ್ ಪುರ ಎಂಜಿಎಂ ಆಸ್ಪತ್ರೆಯಲ್ಲಿ 52 ಶಿಶುಗಳ ಸಾವು!

ಗೋರಕ್ ಪುರ ಆಸ್ಪತ್ರೆ ದುರಂತ ಇನ್ನೂ ಹಸಿರಾಗಿರುವ ಬೆನ್ನಲ್ಲೇ ಅಂತಹುದೇ ಸರಣಿ ಸಾವಿನ ದುರಂತ ಜಾರ್ಖಂಡ್ ನಲ್ಲೂ ಕೇಳಿಬಂದಿದ್ದು, ಜೆಮ್ ಶೆಡ್ ಪುರದ ಮಹಾತ್ಮ ಗಾಂಧಿ ಮೆಮೋರಿಯಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 52 ಶಿಶುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೆಮ್ ಶೆಡ್ ಪುರ: ಗೋರಕ್ ಪುರ ಆಸ್ಪತ್ರೆ ದುರಂತ ಇನ್ನೂ ಹಸಿರಾಗಿರುವ ಬೆನ್ನಲ್ಲೇ ಅಂತಹುದೇ ಸರಣಿ ಸಾವಿನ ದುರಂತ ಜಾರ್ಖಂಡ್ ನಲ್ಲೂ ಕೇಳಿಬಂದಿದ್ದು, ಜೆಮ್ ಶೆಡ್ ಪುರದ ಮಹಾತ್ಮ ಗಾಂಧಿ ಮೆಮೋರಿಯಲ್ ವೈದ್ಯಕೀಯ  ಕಾಲೇಜು ಆಸ್ಪತ್ರೆಯಲ್ಲಿ 52 ಶಿಶುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ನಡೆದ ದುರಂತ ಇನ್ನೂ ಹಸಿರಾಗಿಯೇ ಉಳಿದಿರುವಾಗ ಜಮ್ಶೇಡ್ ಪುರದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಮೂಲಗಳ ಪ್ರಕಾರ ಜೆಮ್ ಶೆಡ್ ಪುರ  ಎಂಜಿಎಂ ಆಸ್ಪತ್ರೆಯಲ್ಲಿ ಕಳೆದ ಕೇವಲ ಒಂದೇ ತಿಂಗಳಲ್ಲೇ 52 ಶಿಶುಗಳು ಸಾವನ್ನಪ್ಪಿವೆ. ಈ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದಾಗ ಅಪೌಷ್ಠಿಕತೆಯೇ ಮಕ್ಕಳ ಸಾವಿಗೆ ಕಾರಣ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್  ಹೇಳಿದ್ದಾರೆ.

ಮಕ್ಕಳ ಸರಣಿ ಸಾವಿನ ಸರಣಿ ಬಳಿಕವೂ ಜಾರ್ಖಂಡ್ ಸರ್ಕಾರ ಮಾತ್ರ ಈ ಬಗ್ಗೆ ನಿರ್ಲಕ್ಷ್ಯವಹಿಸಿದ್ದು, ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com