ಹಳಿತಪ್ಪಿದ ತುರಂತೋ ಎಕ್ಸ್ ಪ್ರೆಸ್: ಮೋದಿ ಸರ್ಕಾರ 'ಹಳಿ ತಪ್ಪಿದ ಸರ್ಕಾರ' ಎಂದ ಕಾಂಗ್ರೆಸ್

ಪದೇ ಪದೇ ರೈಲು ದುರಂತಗಳು ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರ ವಿರುದ್ಧ ಕಾಂಗ್ರೆಸ್ ಮಂಗಳವಾರ...
ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೇವಾಲಾ
ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೇವಾಲಾ
ನವದೆಹಲಿ: ಪದೇ ಪದೇ ರೈಲು ದುರಂತಗಳು ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರ ವಿರುದ್ಧ ಕಾಂಗ್ರೆಸ್ ಮಂಗಳವಾರ ತೀವ್ರವಾಗಿ ಕಿಡಿಕಾರಿದೆ. 
ಇಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ಸಂಭವಿಸಿದ ನಾಗ್ಪುರ-ಮುಂಬೈ ತುರಂತೋ ಎಕ್ಸ್ ಪ್ರೆಸ್ ರೈಲು ಅಪಘಾತ ಪ್ರಕರಣ ಸಂಬಂಧ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೇವಾಲಾ ಅವರು, ಮೋದಿ ಸರ್ಕಾರಕ್ಕೆ 'ಹಳಿತಪ್ಪಿದ ಸರ್ಕಾರ'ವೆಂದು ಮರುನಾಮಕರಣ ಮಾಡಬೇಕೆಂದು ಹೇಳಿದ್ದಾರೆ. 
ರೈಲು ಅಪಘಾತ ಸಂಭವಿಸಿ ಪ್ರತಿನಿತ್ಯ ಪ್ರಯಾಣಿಕರು ಅಪಾಯಕ್ಕೆ ಸಿಲುಕಿ ಹಾಕಿಕೊಳ್ಳುತ್ತಿದ್ದರೂ, ರೈಲ್ವೇ ಇಲಾಖೆ ಮಾತ್ರ ಜವಾಬ್ದಾರಿಯನ್ನೂ ಹೊತ್ತುಕೊಳ್ಳುತ್ತಿಲ್ಲ, ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಸರಣಿಯಾಗಿ ರೈಲ್ವೇ ದುರಂತಗಳು ಸಂಭವಿಸುತ್ತಿದ್ದು, ಸುರೇಶ್ ಪ್ರಭು ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು. ಮತ್ತು ರೈಲ್ವೇ ಸುರಕ್ಷತೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂಕ್ತ ರೀತಿಯ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 
ರೈಲ್ವೇ ಸಚಿವರ ರಾಜೀನಾಮೆಯನ್ನೇಕೆ ಪ್ರಧಾನಿ ಮೋದಿಯವರು ಅಂಗೀಕರಿಸುತ್ತಿಲ್ಲ?...ಪ್ರಯಾಣಿಕರ ಸುರಕ್ಷತೆ ಹಾಗೂ ಹಣವನ್ನು ಮೀಸಲಿಡುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇಕೆ ಹೇಳಿಕೆಗಳನ್ನು ನೀಡುತ್ತಿಲ್ಲ?...ಮೋದಿಯವರೇ ನಿದ್ರೆಯಿಂದ ಏದ್ದೇಳಿ...ರೈಲ್ವೇ ಸಚಿವರ ರಾಜೀನಾಮೆಯನ್ನು ಆಂಗೀಕರಿಸಿ ಹಾಗೂ ರೈಲ್ವೇ ಸುರಕ್ಷತೆ ಬಗ್ಗೆ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಿ ಎಂದು ತಿಳಿಸಿದ್ದಾರೆ. 
ದುರಂತಗಳು ಸಂಭವಿಸುತ್ತಿದ್ದರು, ಜವಾಬ್ದಾರಿ, ಕ್ರಮ ಹಾಗೂ ಸಚಿವರ ರಾಜೀನಾಮೆಯನ್ನು ಅಂಗೀಕರಿಸದ ಮೋದಿ ಸರ್ಕಾರಕ್ಕೆ 'ಹಳಿತಪ್ಪಿದ ಸರ್ಕಾರ'ವೆಂದು ಮರುನಾಮಕರಣ ಮಾಡಬೇಕೆಂದು ರಂದೀಪ್ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com