ಭಾರತದಲ್ಲಿ ಎಫ್-16 ಉತ್ಪಾದನಾ ಘಟಕ ಪ್ರಾರಂಭಿಸಲು ಲಾಕ್ ಹೀಡ್ ಮಾರ್ಟಿನ್ ಸಂಸ್ಥೆ ಉತ್ಸುಕ!

ಅತ್ಯಾಧುನಿಕ ಎಫ್-16 ಫೈಟರ್ ಪ್ಲೇನ್'ಗಳನ್ನ ಭಾರತದಲ್ಲಿ ತಯಾರಿಸಲು ಅಮೆರಿಕದ ಲಾಕ್'ಹೀಡ್ ಮಾರ್ಟಿನ್ ಸಂಸ್ಥೆ ಉತ್ಸಾಹ ತೋರಿದ್ದು, ಭಾರತದಲ್ಲಿ ಎಫ್-16 ಫೈಟರ್ ವಿಮಾನಗಳ ಉತ್ಪಾದನಾ ಘಟಕ...
ಎಫ್-16 ಫೈಟರ್ ವಿಮಾನ
ಎಫ್-16 ಫೈಟರ್ ವಿಮಾನ
ನವದೆಹಲಿ: ಅತ್ಯಾಧುನಿಕ ಮತ್ತು ಶಕ್ತಿಶಾಲಿ ಎಫ್-16 ಫೈಟರ್ ಪ್ಲೇನ್'ಗಳನ್ನ ಭಾರತದಲ್ಲಿ ತಯಾರಿಸಲು ಅಮೆರಿಕದ ಲಾಕ್'ಹೀಡ್ ಮಾರ್ಟಿನ್ ಸಂಸ್ಥೆ ಉತ್ಸಾಹ ತೋರಿದ್ದು, ಭಾರತದಲ್ಲಿ ಎಫ್-16 ಫೈಟರ್ ವಿಮಾನಗಳ ಉತ್ಪಾದನಾ ಘಟಕ ಪ್ರಾರಂಭಿಸಲು ಚಿಂತನೆ ನಡೆಸಿದೆ ಎಂದು ಸಂಸ್ಥೆಯ ಉನ್ನತ ಅಧಿಕಾರಿ ತಿಳಿಸಿದ್ದಾರೆ. 
ಭಾರತದಲ್ಲಿ ಅತ್ಯಾಧುನಿಕ ಫೈಟರ್ ಪ್ಲೇನ್ ಗಳನ್ನು ತಯಾರಿಸಲು ಸ್ವೀಡನ್ ನ ಸಂಸ್ಥೆ ಹಾಗೂ ಅಮೆರಿಕದ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಗಳು ತುದಿಗಾಲಲ್ಲಿ ನಿಂತಿದ್ದು,  ಲಾಕ್ ಹೀಡ್ ಮಾರ್ಟಿನ್ ಭಾರತವನ್ನು ವಿದೇಶದಲ್ಲಿನ ತನ್ನ ಅತ್ಯಾಧುನಿಕ ಎಫ್-16 ಫೈಟರ್ ವಿಮಾನಗಳ ಏಕೈಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಿಕೊಳ್ಳಲು ಬಯಸಿದ್ದು, ಭಾರತದ ಸೇನೆಗೆ ವಿಮಾನಗಳನ್ನು ಪೂರೈಕೆ ಮಾಡುವುದರ ಜೊತೆಗೆ ಇತರ ರಾಷ್ಟ್ರಗಳಿಗೂ ಪೂರೈಕೆ ಮಾಡುವ ಉದ್ದೇಶ ಹೊಂದಿದೆ. 
ಭಾರತದಲ್ಲಿ ಅತ್ಯಾಧುನಿಕ ಫೈಟರ್ ವಿಮಾನಗಳ ತಯಾರಿಕೆ, ಅಭಿವೃದ್ಧಿಯ ಬಗೆಗಿನ ಯೋಜನೆಯ ವಿವರವನ್ನು ಸಲ್ಲಿಸುವಂತೆ ಭಾರತ ಸರ್ಕಾರ ಕೆಲವೇ ದಿನಗಳಲ್ಲಿ ಸ್ವೀಡನ್ ನ ಸಂಸ್ಥೆ ಹಾಗೂ ಅಮೆರಿಕದ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಗಳಿಗೆ  ಸೂಚಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com