ಮುಂಬೈ: ನಿನ್ನೆಯಿಂದ ಮುಂಬೈ ನಗರ ಸುತ್ತಮುತ್ತ ಸುರಿಯುತ್ತಿರುವ ಮಹಾ ಮಳೆಗೆ ಸಿಲುಕಿ ಮೃತಪಟ್ಟ ನಾಗರಿಕರ ಸಂಖ್ಯೆ 6ಕ್ಕೇರಿದೆ.
ವಿಕ್ರೊಲಿಯಲ್ಲಿ ಮಳೆಗೆ ಮನೆ ಕುಸಿದುಬಿದ್ದು ಮತ್ತಿಬ್ಬರು ಅಸುನೀಗಿದ್ದಾರೆ. ನಿನ್ನೆ ಬೆಳಗ್ಗೆ 8.30ರ ಸುಮಾರಿಗೆ ಮುಂಬೈ ಸುತ್ತಮುತ್ತ ಭಾರೀ ಮಳೆ ಆರಂಭವಾಯಿತು.
ಸಾಂತಕ್ರೂಝ್ ಹವಾಮಾನ ಇಲಾಖೆಯಲ್ಲಿ 331.4 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕೊಲಬಾದಲ್ಲಿ 101.8 ಮಿಲಿ ಮೀಟರ್ ನಷ್ಟು ನಿನ್ನೆ ಮಳೆ ಸುರಿದಿದೆ. ಇಂದು ಕೂಡ ಅಂಧೇರಿ, ಥಾಣೆ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದೆ. ಜನರು ಹೊರಗೆ ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.