ತಮಿಳುನಾಡು: ದ್ವಿಚಕ್ರ ವಾಹನ ಖರೀದಿಗೆ ಡಿಎಲ್ ಕಡ್ಡಾಯ

ಅಧಿಕೃತ ಚಾಲನಾ ಪರವಾನಗಿ(ಡಿಎಲ್) ಹೊಂದಿರದ ವ್ಯಕ್ತಿಗಳ ಹೆಸರಿನಲ್ಲಿ ದ್ವಿಚಕ್ರ ವಾಹನಗಳ ನೋಂದಣಿ ಮಾಡದಂತೆ ತಮಿಳುನಾಡು ಸಾರಿಗೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ಅಧಿಕೃತ ಚಾಲನಾ ಪರವಾನಗಿ(ಡಿಎಲ್) ಹೊಂದಿರದ ವ್ಯಕ್ತಿಗಳ ಹೆಸರಿನಲ್ಲಿ ದ್ವಿಚಕ್ರ ವಾಹನಗಳ ನೋಂದಣಿ ಮಾಡದಂತೆ ತಮಿಳುನಾಡು ಸಾರಿಗೆ ಇಲಾಖೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿ(ಆರ್ ಟಿಒ)ಗಳಿಗೆ ನಿರ್ದೇಶನ ನೀಡಿದೆ.
ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಾರಿಗೆ ಇಲಾಖೆ ಆಗಸ್ಟ್ 24ರಂದು ಎಲ್ಲಾ ಆರ್ ಟಿಒ ಕಚೇರಿಗಳಿಗೆ ಈ ಅಧಿಸೂಚನೆ ಹೊರಡಿಸಿದೆ.
ಸಾರಿಗೆ ಇಲಾಖೆ ನಿರ್ದೇಶನದ ಹಿನ್ನೆಯಲ್ಲಿ ಆರ್ ಟಿಒ ಗಳು ಜಿಲ್ಲೆಗಳ ದ್ವಿಚಕ್ರ ವಾಹನಗಳ ಡೀಲರ್ ಗಳನ್ನು ಭೇಟಿ ಮಾಡಿ, ವಾಹನ ಖರೀದಿಸಲು ಬರುವ ಗ್ರಾಹಕರಿಗೆ ಕಡ್ಡಾಯವಾಗಿ ಚಾಲನಾ ಪರವಾನಗಿ ನೀಡುವಂತೆ ಮತ್ತು ಅದರ ಒಂದು ಪ್ರತಿಯನ್ನು ನೋಂದಣಿಗಾಗಿ ಕಳುಹಿಸುವಂತೆ ಸೂಚಿಸಲಿದ್ದಾರೆ.
ದ್ವಿಚಕ್ರ ವಾಹನಗಳ ಖರೀದಿಗೆ ಮಾತ್ರ ಡಿಎಲ್ ಕಡ್ಡಾಯ ಮಾಡಲಾಗಿದೆ. ಕಾರುಗಳಿಗೆ ಡಿಎಲ್ ಕಡ್ಡಾಯ ಮಾಡುವುದು ಕಷ್ಟವಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶೇ.20ರಷ್ಟು ಡಿಎಲ್ ಇಲ್ಲದ ವ್ಯಕ್ತಿಗಳಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಡಿಎಲ್ ಇಲ್ಲದ ವ್ಯಕ್ತಿಗಳಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸುವುದಕ್ಕಾಗಿ ದ್ವಿಚಕ್ರ ವಾಹನಗಳ ಖರೀದಿಗೆ ಡಿಎಲ್ ಕಡ್ಡಾಯ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com