ಚೀನಾಗೆ ಅದರ ಜಾಗ ತೋರಿಸಿದ ನಮ್ಮ ಪ್ರಧಾನಿ ಮೋದಿ, ಸೇನೆ, ಐಟಿಬಿಪಿ ಮೇಲೆ ಹೆಮ್ಮೆಯಿದೆ: ರಾಮ್ ದೇವ್

ಡೋಕ್ಲಾಮ್ ಬಿಕ್ಕಟ್ಟು ಕುರಿತಂತೆ ಚೀನಾಗೆ ಅದರ ಜಾಗ ತೋರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯ ಸೇನೆ ಹಾಗೂ ಇಂಡೋ ಟಿಬಿಟ್ ಗಡಿ ಪೊಲೀಸರ ಮೇಲೆ ಹೆಮ್ಮೆಯಿದೆ ಎಂದು ಯೋಗ ಗುರು ಬಾಬಾ...
ಯೋಗ ಗುರು ಬಾಬಾ ರಾಮ್ ದೇವ್
ಯೋಗ ಗುರು ಬಾಬಾ ರಾಮ್ ದೇವ್
ಹರಿದ್ವಾರ: ಡೋಕ್ಲಾಮ್ ಬಿಕ್ಕಟ್ಟು ಕುರಿತಂತೆ ಚೀನಾಗೆ ಅದರ ಜಾಗ ತೋರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯ ಸೇನೆ ಹಾಗೂ ಇಂಡೋ ಟಿಬಿಟ್ ಗಡಿ ಪೊಲೀಸರ ಮೇಲೆ ಹೆಮ್ಮೆಯಿದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಅವರು ಗುರುವಾರ ಹೇಳಿದ್ದಾರೆ. 
ಡೋಕ್ಲಾಮ್ ವಿವಾದ ಸುಖಾಂತ್ಯ ಕಂಡ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸೆಪ್ಟೆಂಬರ್ 2 ರಂದು ಐಟಿಬಿಪಿ ಯೋಧರಿಗೆ ಯೋಗ ಹೇಳಿಕೊಡುವ ಸಲುವಾಗಿ ರಾಜಧಾನಿ ದೆಹಲಿಗೆ ತೆರಳುತ್ತಿದ್ದೇನೆ. ಡೋಕ್ಲಾಮ್ ವಿವಾದ ಸಂಬಂಧ ಚೀನಾಗೆ ಅದರ ದಾರಿ ತೋರಿಸಿದ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯ ಸೇನೆ ಹಾಗೂ ಐಟಿಬಿಪಿ ಮೇಲೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ. 
ಇತ್ತೀಚೆಗಷ್ಟೇ ಉಭಯ ರಾಷ್ಟ್ರಗಳು ಗಡಿ ಪ್ರದೇಶದಲ್ಲಿ ಉಲ್ಬಣಗೊಂಡಿದ್ದ ಡೋಕ್ಲಾಮ್ ಬಿಕ್ಕಟ್ಟನ್ನು ತಾತ್ಕಾಲಿಕವಾಗಿ ಶಮನಗೊಳಿಸಿತ್ತು. ಸಿಕ್ಕಿಂ ವಲಯದಲ್ಲಿ ಭಾರತ ಹಾಗೂ ಚೀನಾ ರಾಷ್ಟ್ರಗಳು ಏಕಕಾಲದಲ್ಲಿ ತಮ್ಮ ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com