ಠೇವಣಿಯಾದ ನೋಟುಗಳಲ್ಲಿ ಕೆಲಭಾಗ ಕಪ್ಪುಹಣದ್ದು: ಕೇಂದ್ರ ಸರ್ಕಾರ

ಕಳೆದ ನವೆಂಬರ್​ನಲ್ಲಿ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ಬಳಿಕ ರದ್ದಾಗಿದ್ದ ಹಳೆಯ 500 ಮತ್ತು 1,000 ರೂ. ನೋಟುಗಳ ಪೈಕಿ ಶೇ.99ರಷ್ಟು ನೋಟುಗಳು ವಾಪಸಾಗಿದ್ದು. ಈ ಪೈಕಿ ಒಂದ ಕಪ್ಪು ಹಣವಾಗಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಳೆದ ನವೆಂಬರ್​ನಲ್ಲಿ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ಬಳಿಕ ರದ್ದಾಗಿದ್ದ ಹಳೆಯ 500 ಮತ್ತು 1,000 ರೂ. ನೋಟುಗಳ ಪೈಕಿ ಶೇ.99ರಷ್ಟು ನೋಟುಗಳು ವಾಪಸಾಗಿದ್ದು. ಈ ಪೈಕಿ ಒಂದ ಕಪ್ಪು  ಹಣವಾಗಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಾರ್ಷಿಕ ವರದಿ (2016-17)ಯನ್ನು ಬಿಡುಗಡೆ ಮಾಡಿದ್ದು, ನೋಟು ನಿಷೇಧವಾದ ಬಳಿಕದ 8 ತಿಂಗಳುಗಳಲ್ಲಿ ಶೇ.99ರಷ್ಟು ಹಳೆಯ ನಿಷೇಧಿತ 500 ಮತ್ತು 1000 ಮುಖ ಬೆಲೆಯ  ನೋಟುಗಳು ವಾಪಸ್ ಆಗಿದ್ದು, ಶೇ.1ರಷ್ಟು ನೋಟುಗಳು ಮಾತ್ರ ಇನ್ನೂ ವಾಪಸ್ ಆಗಿಲ್ಲ ಎಂದು ಹೇಳಲಾಗಿದೆ. ಇನ್ನು ಆರ್ ಬಿಐನ ವರದಿಯಲ್ಲಿ ನೋಟು ನಿಷೇಧಕ್ಕೂ ಮೊದಲು 15.44 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು  ದೇಶಾದ್ಯಂತ ಚಾಲ್ತಿಯಲ್ಲಿದ್ದವು. ನಿಗದಿತ ಸಮಯದೊಳಗೆ ಅಂದರೆ ಕಳೆದ 8 ತಿಂಗಳ ಅವಧಿಯಲ್ಲಿ 15.28 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳನ್ನು ಜನರು ಹಿಂತಿರುಗಿಸಿದ್ದಾರೆ. ಅಲ್ಲದೆ, 632.6 ಕೋಟಿ ರೂ. ಮೌಲ್ಯದ 1,000 ರೂ.  ಮುಖಬೆಲೆಯ ನೋಟುಗಳ ಪೈಕಿ ಶೇ. 1.3 ರಷ್ಟು ಅಂದರೆ 8.9 ಕೋಟಿ ರೂ. ಮೌಲ್ಯದ ನೋಟುಗಳು ಇನ್ನೂ ಸಿಕ್ಕಿಲ್ಲ. ಅಂತೆಯೇ 2017ರ ಮಾರ್ಚ್ ಅಂತ್ಯದ ವೇಳೆ ಚಲಾವಣೆಯಲ್ಲಿದ್ದ ನೋಟುಗಳ ಸಂಖ್ಯೆ ಶೇ.20.2 ಕುಸಿತವಾಗಿತ್ತು.  ಚಲಾವಣೆಯಲ್ಲಿದ್ದ ನೋಟುಗಳ ಮೌಲ್ಯ 13, 10, 200 ಕೋಟಿ ರೂ. ಆಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

7.62 ಲಕ್ಷ ನಕಲಿ ನೋಟುಗಳು ಪತ್ತೆ
ಇದೇ ವೇಳೆ ಆರ್ ಬಿಐ ತನ್ನ ವರದಿಯಲ್ಲಿ ನೋಟು ನಿಷೇಧ ಬಳಿಕ ಠೇವಣಿಯಾದ ನೋಟುಗಳ ಪೈಕಿ 13.94 ಲಕ್ಷ  ನಕಲಿ ನೋಟುಗಳು ಪತ್ತೆಯಾಗಿವೆ. ಈ ಪೈಕಿ  2016ರಲ್ಲಿ 6.32 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದರೆ,  2017ರಲ್ಲಿ 7.62 ಲಕ್ಷ ನೋಟುಗಳು ಪತ್ತೆಯಾಗಿವೆ ಎಂದು ಆರ್​ಬಿಐ ವರದಿಯಲ್ಲಿ ಹೇಳಲಾಗಿದೆ.

ಹೊಸ ನೋಟುಗಳೂ ನಕಲಿಯಾಗತ್ತಿವೆ ಎಂದು ಒಪ್ಪಿಕೊಂಡ ಆರ್ ಬಿಐ
ಕೇವಲ ಹಳೆಯ ನೋಟುಗಳು ಮಾತ್ರವಲ್ಲ ಪ್ರಸ್ತುತ ಆರ್ ಬಿಐ ಬಿಡುಗಡೆ ಮಾಡಿರುವ ಹೊಸ 500 ಹಾಗೂ 2 ಸಾವಿರ ರೂ. ನೋಟುಗಳನ್ನೂ ನಕಲು ಮಾಡುತ್ತಿರುವುದು ವರದಿಯಿಂದ ಬಹಿರಂಗಗೊಂಡಿದೆ. ದೇಶಾದ್ಯಂತ 2 ಸಾವಿರ  ರೂ. ಮುಖ ಬೆಲೆಯ 638 ನಕಲಿ ನೋಟು ಪ್ರಕರಣ ಬೆಳಕಿಗೆ ಬಂದಿದ್ದು, 500 ರೂ. ನಕಲು ಮಾಡಿದ ಬಗ್ಗೆ 199 ಪ್ರಕರಣ ದಾಖಲಾಗಿದೆ ಎಂದು ಆರ್ ಬಿಐ ತನ್ನ ವರದಿಯಲ್ಲಿ ಹೇಳಿದೆ. ಅಂತೆಯೇ ಈಗ ಚಲಾವಣೆಯಲ್ಲಿರುವ ನೋಟುಗಳ  ಸಂಖ್ಯೆ ಶೇಕಡ 11.1 ಏರಿಕೆಯಾಗಿದ್ದು, ಕಡಿಮೆ ಮುಖಬೆಲೆಯ ನೋಟುಗಳ ಸಂಖ್ಯೆ ಹೆಚ್ಚಿಸಲಾಗಿದೆ. 2017ರ ಮಾರ್ಚ್ ಅಂತ್ಯದ ವೇಳೆ ಹೊಸದಾಗಿ ಪರಿಚಯಿಸಿದ 2,000 ರೂ. ನೋಟುಗಳ ಮೌಲ್ಯ ಒಟ್ಟು ನೋಟುಗಳ ಮೌಲ್ಯದ  ಶೇಕಡ 50.2 ಇತ್ತು. 10 ರೂ. ಮತ್ತು 100 ರೂ. ನೋಟುಗಳ ಮೌಲ್ಯ ಶೇ. 62 ರಷ್ಟು ಇತ್ತು.

ಅಂತೆಯೇ ಆರ್ ಬಿಐ ತನ್ನ ವರದಿಯಲ್ಲಿ ನೋಟು ಮುದ್ರಣದ ವೆಚ್ಚ 2015-16ರಲ್ಲಿ 3,421 ಕೋಟಿ ರೂ. ಆಗಿದ್ದರೆ, 2016-17ರಲ್ಲಿ 7,965 ಕೋಟಿ ರೂ. ಆಗಿದೆ. ಹೊಸ ನೋಟುಗಳ ಮುದ್ರಣ ಹೆಚ್ಚಿಸಿದ್ದರಿಂದ ಈ ರೀತಿ ವ್ಯತ್ಯಾಸವಾಗಿದೆ  ಎಂದು ವರದಿ ತಿಳಿಸಿದೆ. ಕಳೆದ ನವೆಂಬರ್ 8 ರಂದು 1,000 ಮತ್ತು 500 ರೂ. ಹಳೇ ನೋಟುಗಳನ್ನು ರದ್ದುಗೊಳಿಸಿದ್ದ ವೇಳೆ 6.86 ಲಕ್ಷ ಕೋಟಿ ರೂ. ಮೌಲ್ಯದ 1,000 ರೂ. ನೋಟುಗಳು ಚಾಲ್ತಿಯಲ್ಲಿದ್ದವು ಎಂದು ವಿತ್ತ ಖಾತೆ ರಾಜ್ಯ  ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಫೆಬ್ರವರಿ 3 ರಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com