ಉತ್ಕಲ್ ಎಕ್ಸ್'ಪ್ರೆಸ್ ರೈಲು ದುರಂತ: 13 ರೈಲ್ವೇ ಸಿಬ್ಬಂದಿಗಳು ಅಮಾನತು

ಉತ್ಕಲ್ ಎಕ್ಸ್ ಪ್ರೆಸ್ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 13 ರೈಲ್ವೇ ಸಿಬ್ಬಂದಿಗಳನ್ನು ಬುಧವಾರ ಅಮಾನತು ಮಾಡಲಾಗಿದೆ...
ಹಳಿತಪ್ಪಿದ ಉತ್ಕಲ್ ಎಕ್ಸ್ ಪ್ರೆಸ್ ರೈಲು
ಹಳಿತಪ್ಪಿದ ಉತ್ಕಲ್ ಎಕ್ಸ್ ಪ್ರೆಸ್ ರೈಲು
ನವದೆಹಲಿ: ಉತ್ಕಲ್ ಎಕ್ಸ್ ಪ್ರೆಸ್ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 13 ರೈಲ್ವೇ ಸಿಬ್ಬಂದಿಗಳನ್ನು ಬುಧವಾರ ಅಮಾನತು ಮಾಡಲಾಗಿದೆ. 
ದುರಂತಕ್ಕೆ ಹಳಿ ನಿರ್ವಹಣೆ ವೈಫಲ್ಯವೇ ಕಾರಣ ಎಂಬ ವರದಿಗಳು ಬಂದ ಹಿನ್ನಲೆಯಲ್ಲಿ ಜೂನಿಯರ್ ಇಂಜಿನಿಯರ್ ಸೇರಿದಂತೆ ಒಟ್ಟು 13 ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ರೈಲ್ವೇ ಸಚಿವಾಲಯ ಹೇಳಿದೆ.
ಉತ್ಕಲ್ ಎಕ್ಸ್ ಪ್ರೆಸ್ ರೈಲಿನ 14 ಬೋಗಿಗಳು ಕತೌಲಿ ವಿಭಾಗದ ಬಳಿ ಹಳಿ ತಪ್ಪಿ ದುರಂತ ಸಂಭವಿಸಿತ್ತು. ಪ್ರಸ್ತುತ ಅಮಾನತುಗೊಂಡಿರುವ ಎಲ್ಲಾ 13 ಸಿಬ್ಬಂದಿಗಳೂ ಕತೌಲಿ ವಿಭಾಗದಲ್ಲಿ ಹಳಿ ನಿರ್ವಹಣೆಯ ಕಾರ್ಯನಿರ್ವಹಿಸುತ್ತಿದ್ದರು. 
ನಿಯಮ ಉಲ್ಲಂಘನೆ, ನಿರ್ಲಕ್ಷ್ಯ, ಹಾಗೂ ಶಿಸ್ತು ಪಾಲನೆ ಮಾಡದ ಹಿನ್ನಲೆಯಲ್ಲಿ ಸೆಕ್ಷನ್ 14 ರ ಅಡಿಯಲ್ಲಿ 13 ರೈಲ್ವೇ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಉತ್ತರ ರೈಲ್ವೇ ವಿಭಾಗದ ವಕ್ತಾರ ನೀರಜ್ ಶರ್ಮಾ ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉತ್ಕಲ್ ಎಕ್ಸ್ ಪ್ರೆಸ್ ನ 13 ಹೋಗಿಗಳು ಹಳಿ ತಪ್ಪಿ 22 ಪ್ರಯಾಣಿಕರು ಸಾವನ್ನಪ್ಪಿದ್ದರು. ಅಲ್ಲದೆ 156 ಮಂದಿ ಗಾಯಗೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ರೈಲ್ವೇ ಸಚಿವಾಲಯ, ದುರಂತಕ್ಕೆ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿ, ದುರಂತಕ್ಕೆ ಕಾರಣರಾದವರ ವಿರುದ್ಧದ ಅಭೂತಪೂರ್ವ ಶಿಸ್ತುಕ್ರಮದ ಭಾಗವಾಗಿ ರೈಲ್ವೇ ಇಲಾಖೆಯ ಮೂವರು ಉನ್ನತಾಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com