ಆಪರೇಷನ್ ಕ್ಲೀನ್ ಮನಿ: 1 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿ ಮಾಲೀಕರ ಮೇಲೆ ಐಟಿ ಕಣ್ಣು!

ಕೇಂದ್ರ ಆದಾಯ ತೆರಿಗೆ ತನ್ನ ಆಪರೇಷನ್ ಕ್ಲೀನ್ ಮನಿ ಕಾರ್ಯಾಚರಣೆಯನ್ನು ವಿಸ್ತರಿಸುವ ಮುನ್ಸೂಚನೆ ನೀಡಿದ್ದು, ತೆರಿಗೆ ಪಾವತಿ ಮಾಡದ 14000 ಸ್ಥಿರಾಸ್ತಿ ಮಾಲೀಕರ ಮೇಲೆ ಕಣ್ಣಿರಿಸಿದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೇಂದ್ರ ಆದಾಯ ತೆರಿಗೆ ತನ್ನ ಆಪರೇಷನ್ ಕ್ಲೀನ್ ಮನಿ ಕಾರ್ಯಾಚರಣೆಯನ್ನು ವಿಸ್ತರಿಸುವ ಮುನ್ಸೂಚನೆ ನೀಡಿದ್ದು, ತೆರಿಗೆ ಪಾವತಿ ಮಾಡದ 14000 ಸ್ಥಿರಾಸ್ತಿ ಮಾಲೀಕರ ಮೇಲೆ ಕಣ್ಣಿರಿಸಿದೆ ಎಂದು ಹೇಳಲಾಗುತ್ತಿದೆ.
ಐಟಿ ಇಲಾಖೆ ಮೂಲಗಳ ಪ್ರಕಾರ ತೆರಿಗೆ ಪಾವತಿ ಮಾಡದ ಮತ್ತು ಶಂಕಾಸ್ಪದ ಹಣದ ವಹಿವಾಟು ಮಾಡಿರುವ ಸುಮಾರು 14 ಸಾವಿರ ಸ್ಥಿರಾಸ್ತಿ ಮಾಲೀಕರ ವಿರುದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು, ಈ 14 ಸಾವಿರ ಮಾಲಕೀರ ಮೇಲೆ ಕಣ್ಣಿರಿಸಿದ್ದಾರೆ ಎಂದು ಹೇಳಲಾಗಿದೆ. ಈ 14 ಸಾವಿರ ಮಾಲೀಕರ ಆಸ್ತಿ ಮೌಲ್ಯ 1 ಕೋಟಿ ಮೀರಿದ್ದು, ಈ ವರೆಗೂ ಇವರು ಆದಾಯ ತೆರಿಗೆ ಪಾವತಿ ಮಾಡಿಲ್ಲ. ಹೀಗಾಗಿ ಅಧಿಕಾರಿಗಳು ಇವರ ಹಣದ ವಹಿವಾಟಿನ ಮೇಲೆ ನಿಗಾ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ನೋಟು ನಿಷೇಧ ಬಳಿಕ ಅಂದರೆ ಕಳೆದ ಜನವರಿ 31ರಿಂದ ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಪರೇಷನ್ ಕ್ಲೀನ್ ಮನಿ ಕಾರ್ಯಾಚರಣೆ ಆರಂಭಿಸಿದ್ದು, ಈ ಕಾರ್ಯಾಚರಣೆಯಲ್ಲಿ ಶಂಕಾಸ್ಪದ ವಹಿವಾಟುದಾರರು ಮತ್ತು ನೋಟು ನಿಷೇಧ ಬಳಿಕ 2 ಲಕ್ಷಕ್ಕಿಂತ ಅಧಿಕ ಹಣವನ್ನು ಬ್ಯಾಂಕ್ ಗಳಿಗೆ ಠೇವಣಿ ಮಾಡಿದವರ ಮೇಲೆ ನಿಗಾ ಇರಿಸಿದ್ದಾರೆ. ನೋಟು ನಿಷೇಧ ಬಳಿಕ ಈ ವರೆಗೂ 15, 496 ಕೋಟಿ ಬಹಿರಂಗ ಪಡಿಸದ ಆದಾಯ ಪತ್ತೆಯಾಗಿದ್ದು, ದಾಳಿ ಮತ್ತು ಜಪ್ತಿ ವೇಳೆ 13, 920 ಕೋಟಿ ಪತ್ತೆಯಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗಮನಿದಂತೆ ನೋಟು ನಿಷೇಧ ಬಳಿಕ 9.72 ಲಕ್ಷ ಖಾತೆದಾರರಿಂದ 13.33 ಲಕ್ಷ ಬ್ಯಾಂಕ್ ಖಾತೆಗಳಲ್ಲಿ ಶಂಕಾಸ್ಪದ ಬ್ಯಾಂಕ್ ವಹಿವಾಟು ನಡೆದಿದೆ. ಈ ಖಾತೆಗಳಲ್ಲಿ ಸುಮಾರು 2.89 ಲಕ್ಷ ಕೋಟಿ ಹಣ ಠೇವಣಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಕಾರಣಕ್ಕೆ ತೆರಿಗೆ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿದ್ದು, ಕಪ್ಪುಹಣವನ್ನು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ತೊಡಗಿಸಿರುವ ಶಂಕೆ ಮೇರೆಗೆ 1 ಕೋಟಿಗೂ ಅಧಿಕ ಸ್ಥಿರಾಸ್ತಿ ಹೊಂದಿರುವವರ ಮೇಲೆ ತೆರಿಗೆ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಅದರಂತೆ ದೇಶಾದ್ಯಂತ ಸುಮಾರು 14 ಸಾವಿರ ಮಾಲೀಕರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರಿತಿಸಿದ್ದು, ಇವರ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸರ್ವೆಯೊಂದರ ಪ್ರಕಾರ ನೋಟು ನಿಷೇಧದ ಬಳಿಕ ಬಹಿರಂಗಪಡಿಸದ ಆದಾಯ ಪ್ರಮಾಣ ನೋಟು ನಿಷೇಧದ ಮೊದಲಿಗಿಂತಲೂ ಮೂರು ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ನೋಟು ನಿಷೇಧದ ಬಳಿಕ ಘೋಷಣೆಯಾಗದ ಆದಾಯ ಮೌಲ್ಯ 11,226 ಕೋಟಿ ರುಗಳಿಂದ ದಿಂದ 15,496 ಕೋಟಿ ರುಗಳಿಗೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com