ರಾಮ್ ರಹೀಂ ಮಾನಸ ಪುತ್ರಿ ಹನಿಪ್ರೀತ್ ಇನ್ಸಾನ್ ಗೆ ಲುಕೌಟ್ ನೋಟಿಸ್!

ಅನುಯಾಯಿಗಳ ಮೇಲಿನ ಅತ್ಯಾಚಾರ ಆರೋಪದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ಸಿಂಗ್‌ ನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ವಿರುದ್ಧ ಶುಕ್ರವಾರ ಹರ್ಯಾಣ ಪೊಲೀಸರು ಲುಕ್‌ ಔಟ್ ನೊಟೀಸ್ ಜಾರಿ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಂಡೀಘಡ: ಅನುಯಾಯಿಗಳ ಮೇಲಿನ ಅತ್ಯಾಚಾರ ಆರೋಪದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ಸಿಂಗ್‌ ನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ವಿರುದ್ಧ ಶುಕ್ರವಾರ ಹರ್ಯಾಣ ಪೊಲೀಸರು ಲುಕ್‌ ಔಟ್ ನೊಟೀಸ್ ಜಾರಿ ಮಾಡಿದ್ದಾರೆ.

ಮೂಲಗಳ ಪ್ರಕಾರ ಡೆರಾ ಸಚ್ಚಾ ಆಶ್ರಮದಲ್ಲಿನ ಆಕ್ರಮ ಚಟುವಟಿಕೆಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಹನಿಪ್ರೀತ್ ಇನ್ಸಾನ್ ರನ್ನು ಪೊಲೀಸರು ವಿಚಾರಣೆಗೊಳಪಡಿಸಲು ಮುಂದಾಗಿದ್ದರು. ಆದರೆ  ಕಳೆದ ಕೆಲವು ದಿನಗಳಿಂದ ತಲೆ ಮರೆಸಿಕೊಂಡಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಹನಿಪ್ರೀತ್ ರೋಹ್ಟಕ್‌ನಲ್ಲಿರುವ ಡೇರಾ ಬೆಂಬಲಿಗರ ಮನೆಯಲ್ಲಿ ಅಡಗಿ ಕುಳಿತ್ತಿದ್ದಾರೆ ಎಂದು ವರದಿಯಾಗಿದೆ.

ಅಂತೆಯೇ ಕಳೆದ ಶುಕ್ರವಾರ ಗುರ್ಮಿತ್‌ಗೆ ರೇಪ್ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ಹರ್ಯಾಣದ ಪಂಚಕುಲ ನ್ಯಾಯಾಲಯದ ಸಂಕೀರ್ಣದಿಂದ ಗುರ್ಮಿತ್‌ ರೊಂದಿಗೆ ವಿಮಾನದಲ್ಲಿ ಹನಿಪ್ರೀತ್ ತೆರಳಲು ಅವಕಾಶ ಸಿಕ್ಕಿದ್ದು,  ಹೇಗೆ ಎಂಬ ಬಗ್ಗೆ ಹರ್ಯಾಣ ಸರ್ಕಾರ ತನಿಖೆ ನಡೆಸುತ್ತಿದೆ. ಹನಿಪ್ರೀತ್ ಹೆಲಿಕಾಪ್ಟರ್ ನಲ್ಲಿ ಮನ್‌ಪ್ರಿತ್ ಪಕ್ಕದಲ್ಲೇ ಕುಳಿತು ಪ್ರಯಾಣಿಸಿದ್ದರು. ಹೀಗಾಗಿ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಕೈವಾಡದ ಕುರಿತು ಸರ್ಕಾರ ತನಿಖೆ  ನಡೆಸುತ್ತಿದೆ.

ಡೇರಾ ಸಚ್ಚಾ ಸೌದಾದ ಉತ್ತರಾಧಿಕಾರಿಯೆಂದೇ ಬಿಂಬಿತವಾಗಿರುವ ಹನಿಪ್ರೀತ್ ಆಗಸ್ಟ್ 25 ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಗುರ್ಮಿತ್ ಜೊತೆಗಿದ್ದು, ಗುರ್ಮಿತ್ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ್ದ ಆರೋಪವೂ ಇವರ  ಮೇಲಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಆಕೆಯನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com