ಡೇರಾ ಬೆಂಬಲಿಗರಿಂದ ಹಿಂಸಾಚಾರ: ರಾಮ್ ರಹೀಮ್ ಮೇಲೆ ಸಹ ಕೈದಿಗಳ ಕೆಂಗಣ್ಣು!

ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲು ಸೇರಿದ ಬಳಿಕ ಅವರ ಬೆಂಬಲಿಗರ ನಡೆಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರ್ಮಿತ್ ಮೇಲೆ ಸಹ ಕೈದಿಗಳು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದು...
ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್
ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್

ನವದೆಹಲಿ: ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲು ಸೇರಿದ ಬಳಿಕ ಅವರ ಬೆಂಬಲಿಗರ ನಡೆಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರ್ಮಿತ್ ಮೇಲೆ ಸಹ ಕೈದಿಗಳು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದು, ಭದ್ರತಾ ದೃಷ್ಟಿಯಿಂದ ರಾಮ್ ರಹೀಮ್ ನನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಲಾಗಿದೆ ಮಾಜಿ ಕೈದಿಯೊಬ್ಬರು ಹೇಳಿಕೊಂಡಿದ್ದಾರೆ. 

ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಹಿನ್ನಲೆಯಲ್ಲಿ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲು ಸೇರಿದ್ದಾರೆ. ರಾಮ್ ರಹೀಮ್ ಜೈಲು ಸೇರಿದ ಬಳಿಕ ಜೈಲಿನಲ್ಲಿ ಅವರೊಂದಿಗೆ 5 ದಿನಗಳು ಕಾಲ ಕಳೆದ ಸಹ ಕೈದಿ ಸ್ವದೇಶ್ ಕಿರಾದ್ ಅವರು ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. 

ಜೈಲಿನಿಂದ ಬಿಡುಗಡೆಗೊಂಡ ಬಳಿಕ ಜೈಲಿನಲ್ಲಿ ನಿರ್ಮಾಣವಾಗಿರುವ ವಾತಾವರಣ ಕುರಿತಂತೆ ಮಾಹಿತಿ ನೀಡಿರುವ ಅವರು, ಸ್ವಯಂ ಘೋಷಿತ ದೇವಮಾನವನಿಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಸೌಲಭ್ಯಗಳನ್ನು ನೀಡುತ್ತಿಲ್ಲ. ಆದರೆ, ಡೇರಾ ಬೆಂಬಲಿಗರು ಹರಿಯಾಣ ರಾಜ್ಯದಲ್ಲಿ ಹಿಂಸಾಚಾರ ಸೃಷ್ಟಿಸಿರುವುದರಿಂದ ಸಹ ಕೈದಿಗಳು ರಾಮ್ ರಹೀಮ್ ಮೇಲೆ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದಾರೆ. ಕೈದಿಗಳು ಎಲ್ಲಿ ರಾಮ್ ರಹೀಮ್ ಮೇಲೆ ದಾಳಿ ಮಾಡುತ್ತಾರೋ ಎಂಬ ಕಾರಣಕ್ಕೆ ಭದ್ರತಾ ದೃಷ್ಟಿಯಿಂದ ಅಧಿಕಾರಿಗಳು ರಾಮ್ ರಹೀಮ್ ನನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ. 
ಜೈಲು ಸೇರಿದಾಗಿನಿಂದಲೂ ರಾಮ್ ರಹೀಮ್ ಮನಸ್ಸಿನಲ್ಲೇ ಗೊಣಗುತ್ತಿದ್ದರು. ಜೈಲು ಸೇರುವಂತಹ ಪರಿಸ್ಥಿತಿ ಎದುರಿಸಲು ನಾನೇನು ಮಾಡಿದೆ... ದೇವರೇ...? ಎಂದು ಹೇಳುತ್ತಲೇ ಇದ್ದರು. ಸರಿಯಾದ ಊಟ, ನಿದ್ರೆಯನ್ನು ಮಾಡುತ್ತಿರಲಿಲ್ಲ. ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. 

5 ದಿನಗಳ ಕಾಲ ನಾನು ರಾಮ್ ರಹೀಮ್ ಜೊತೆಗಿದ್ದೆ. ಜೈಲು ಸಿಬ್ಬಂದಿ ನೀಡುತ್ತಿದ್ದ ಆಹಾರವನ್ನು ತಿನ್ನುತ್ತಿರಲಿಲ್ಲ. ಕೇವಲ ಹಾಲು, ಟೀ ಹಾಗೂ ಬಿಸ್ಕೆಟ್ ಮಾತ್ರವೇ ತಿನ್ನುತ್ತಿದ್ದರು. 

ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುತ್ತಿದ್ದಂತೆಯೇ ರಾಮ್ ರಹೀಮ್ ಗೆ ನಿಲ್ಲಿಲು ಸಾಧ್ಯವಾಗದೆ ನೆಲಕ್ಕೆ ಕುಸಿದಿದ್ದರು. ನನ್ನನ್ನು ಗಲ್ಲಿಗೇರಿಸಿ. ನನಗೆ ಬದುಕಲು ಇಷ್ಟವಿಲ್ಲ ಎಂದು ಹೇಳಿದ್ದರು ಎಂದು ಸ್ವದೇಶ್ ಕಿರಾದ್ ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com