ಸುಪ್ರೀಂ ಕೋರ್ಟ್ ನಲ್ಲಿ ನೀಟ್ ವಿರುದ್ಧ ವಾದಿಸಿದ್ದ ತಮಿಳುನಾಡು ಹುಡುಗಿ ಆತ್ಮಹತ್ಯೆ

ತಮಿಳುನಾಡಿನ ಅರಿಯಲೂರ್ ಜಿಲ್ಲೆಯ ದಲಿತ ಬಾಲಕಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಎಸ್. ಅನಿತಾ
ಎಸ್. ಅನಿತಾ
Updated on: 
ತಮಿಳುನಾಡು: ತಮಿಳುನಾಡಿನ ಅರಿಯಲೂರ್ ಜಿಲ್ಲೆಯ ದಲಿತ ಬಾಲಕಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಇವರು. ನೀಟ್ ಪರೀಕ್ಷೆ ಅಂಕಗಳನ್ನು ಮಾತ್ರವೇ ಆಧರಿಸಿ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶವನ್ನು ಕಲ್ಪಿಸಬಾರದೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದವರ ಪೈಕಿ ಈಕೆಯೂ ಒಬ್ಬಳಾಗಿದ್ದಳು.
ಸೆಂದುರೈನ ಕಾರ್ಮಿಕರೊಬ್ಬರ ಮಗಳಾಗಿದ್ದ ಎಸ್. ಅನಿತಾ ರಾಜ್ಯ ಶಿಕ್ಷಣ ಇಲಾಖೆಯ 12 ನೇ ತರಗತಿ ಪರೀಕ್ಷೆಯಲ್ಲಿ 1,176 ಅಂಕಗಳನ್ನು ಗಳಿಸಿದ್ದಳು. ಆದರೆ ಸಿಬಿಎಸ್ಇ ಪಠ್ಯಕ್ರಮದ ಆಧಾರದ ಮೇಲೆ ನಡೆಸಲಾದ ನೀಟ್ ನಲ್ಲಿ, ಅನಿತಾ ಶೇ.86 ಅಂಕಗಳನ್ನಷ್ಟೆ ಗಳಿಸಿದ್ದಳು.
ಈಕೆ ಇಂಜಿನಿಯರಿಂಗ್ ನಲ್ಲಿ 199.75 ರ ಕಟ್-ಆಫ್ ಅಂಕಗಳನ್ನು ಮತ್ತು ಮೆಡಿಕಲ್ ನಲ್ಲಿ 196.75 ಗಳಿಸಿದ್ದಳು. ಮತ್ತು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಇಂಜಿನಿಯರ್ ಗಾಗಿ ಅರ್ಜಿ ಹಾಕಿದ್ದಳು. ಅನಿತಾ ಓರನಾಥಾಡರದ ಪಶುವೈದ್ಯಕೀಯ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಪಶುವೈದ್ಯ ವಿಜ್ಞಾನ ಪದವಿಗೆ ಆಯ್ಕೆಗೊಂಡಿದ್ದರು. "ತಾನು ವೈದ್ಯಳಾಗಬೇಕೆಂದು ಬಯಸಿದ್ದೇನೆ." ಎಂದು ಇತ್ತೀಚೆಗೆ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com