ಹೊಸದಿಲ್ಲಿ: ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅಸ್ತಿತ್ವದ ಹೊರತಾಗಿಯೂ ದೇಶದಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ. ಇದನ್ನು ಹೆಚ್ಚಾಗಿ ಮಗುವಿನ ಹೆತ್ತವರ ಪ್ರೋತ್ಸಾಹದಿಂದಲೇ ನಡೆಸಲಾಗುತ್ತಿದೆ, ಇದು ದುರದೃಷ್ಟಕರ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ.ಬಿ.ಲೊಕುರ್ ಮತ್ತು ದೀಪಕ್ ಗುಪ್ತ ಅವರನ್ನೊಳಗೊಂಡ ನ್ಯಾಯಪೀಠ ಇಂದು ವಿಷಾದ ವ್ಯಕ್ತಪಡಿಸಿದೆ
15-18 ವರ್ಷ ವಯಸ್ಸಿನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ವಿನಾಯತಿ ನೀಡಬೇಕೆಂದು ಎನ್‌ಜಿಒವೊಂದು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಇಂಡಿಯನ್ ಫೀನಲ್ ಕೋಡ್ (ಐಪಿಸಿ) ವಿಭಾಗ 375 ರಲ್ಲಿ ಅಂತಹ ನಿಬಂಧನೆಗಳನ್ನು ತೆಗೆದುಹಾಕುವುದರಿಂದ ಅಪರಾಧಗಳಾ ಸಂಖ್ಯೆ ಹೆಚ್ಚುತ್ತದೆ ಎಂದು ಸುಪ್ರೀಂ ಅಭಿಪ್ರಾಯಿಸಿದೆ.
ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತೆಯೊಂದಿಗೆ ಮದುವೆಯಾಗುವುದಾಗಿ ಹೇಳಲಾಗುವುದಿಲ್ಲ, ಇದರಿಂದಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅಪ್ರಾಪ್ತೆ ಪತ್ನಿಯೊಂದಿಗೂ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ ಎಂದು ಇದೇವೇಳೆ ಕೋರ್ಟ್ ಅಭಿಪ್ರಾಯ ಪಟ್ಟಿದೆ.