ಒಖಿ ಚಂಡಮಾರುತ: ರಕ್ಷಣಾ ಕಾರ್ಯಾಚರಣೆ, ಶೋಧ ಕಾರ್ಯಾಚರಣೆ ಮುಂದುವರಿಸಿದ ನೌಕಾಪಡೆ

ಒಖಿ ಚಂಡಮಾರುತ ಪೀಡಿತ ಕೇರಳ ಹಾಗೂ ಲಕ್ಷದ್ವೀಪದಲ್ಲಿ ಭಾರತೀಯ ನೌಕಾ ಪಡೆ ಹಾಗೂ ಕೋಸ್ಟ್ ಗಾರ್ಡ್ ಪಡೆಗಳು ಶೋಧ ಕಾರ್ಯಾಚರಣೆ, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿವೆ.
ಒಖಿ ಚಂಡಮಾರುತ
ಒಖಿ ಚಂಡಮಾರುತ
ನವದೆಹಲಿ: ಒಖಿ ಚಂಡಮಾರುತ ಪೀಡಿತ ಕೇರಳ ಹಾಗೂ ಲಕ್ಷದ್ವೀಪದಲ್ಲಿ ಭಾರತೀಯ ನೌಕಾ ಪಡೆ ಹಾಗೂ ಕೋಸ್ಟ್ ಗಾರ್ಡ್ ಪಡೆಗಳು ಶೋಧ ಕಾರ್ಯಾಚರಣೆ, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿವೆ. 
ಚಂಡಮಾರುತಕ್ಕೆ ಸಿಲುಕಿ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಹಡಗು, ಡಾರ್ನಿಯರ್ ವಿಮಾನ, ಹೆಲಿಕಾಫ್ಟರ್ ಗಳನ್ನು ಬಳಸಿ ಶೋಧಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಐಎನ್ಎಸ್ ನಿರೀಕ್ಷಕ್, ಐಎನ್ಎಸ್ ಜಮುನಾ ಹಾಗೂ ಐಎನ್ಎಸ್ ಸಾಗರ್ ಧ್ವನಿ ಗಳು ಕೇರಳದಲ್ಲಿ ಶೋಧಕಾರ್ಯಾಚರಣೆಗೆ ನೆರವಾಗಿದ್ದು, ಐಎನ್ಎಸ್ ಶಾರ್ದಾ ಹಾಗೂ ಶಾರ್ದೂಲ್ ಲಕ್ಷದ್ವೀಪದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ಬಳಕೆಯಾಗಿವೆ.  
ರಕ್ಷಿಸಲಾಗಿರುವ 15 ಮೀನುಗಾರರನ್ನು ತಿರುವನಂತಪುರಂ ಗೆ ಕರೆತರಲಾಗುತ್ತಿದ್ದು, ಕೊಚ್ಚಿ ಗೆ 20 ಮೈಲಿ ದೂರದಲ್ಲಿ ಇಂದು ಬೆಳಿಗ್ಗೆ 4 ಮೀನುಗಾರರನ್ನು ನೌಕಾಪಡೆ ಹೆಲಿಕಾಫ್ಟರ್ ಮೂಲಕ ರಕ್ಷಿಸಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com