ಕಮೋವ್ 226 ಟಿ ಜೆವಿ ಹೆಲಿಕಾಪ್ಟರ್‌ ಗಳನ್ನೂ ಭಾರತೀಯ ನೌಕಾಪಡೆ ಪರಿಗಣಿಸಲಿ: ರಷ್ಯಾ ಸಂಸ್ಥೆ

ಭಾರತೀಯ ನೌಕಾಪಡೆಗೆ 111 ಹೆಲಿಕಾಫ್ಟರ್ ಗಳನ್ನು ಖರೀದಿಸುವ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರುತ್ತಿದ್ದಂತೆಯೇ ರಷ್ಯಾದ ಮುಂಚೂಣಿಯಲ್ಲಿರುವ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ತನ್ನ
ಕಮೋವ್ 226 ಟಿ ಜೆವಿ ಹೆಲಿಕಾಫ್ಟರ್
ಕಮೋವ್ 226 ಟಿ ಜೆವಿ ಹೆಲಿಕಾಫ್ಟರ್
ರಷ್ಯಾ: ಭಾರತೀಯ ನೌಕಾಪಡೆಗೆ 111 ಹೆಲಿಕಾಫ್ಟರ್ ಗಳನ್ನು ಖರೀದಿಸುವ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರುತ್ತಿದ್ದಂತೆಯೇ ರಷ್ಯಾದ ಮುಂಚೂಣಿಯಲ್ಲಿರುವ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ತನ್ನ ಕಮೋವ್ 226 ಟಿ ಹೆಲಿಕಾಫ್ಟರ್ ನ್ನೂ ಪರಿಗಣಿಸಬೇಕೆಂದು ಹೇಳಿದೆ. 
ಕಮೋವ್ 226 ಟಿ ಹೆಲಿಕಾಫ್ಟರ್ ಗಳು ಭಾರತೀಯ ನೌಕಾಪಡೆಯ ಅಗತ್ಯಗಳಿಗೆ ತಕ್ಕಂತೆ ಇದೆ. ಭಾರತೀಯ ರಕ್ಷಣಾ ಇಲಾಖೆ ತನ್ನ ನೌಕಾಪಡೆಗಾಗಿ ಲೆಟೆಸ್ಟ್ ಬದಲಾವಣೆಯೊಂದಿಗೆ ತಯಾರಿಸಲ್ಪಟ್ಟಿರುವ ರಷ್ಯಾದ ಕಮೋವ್ 226 ಟಿ ಚಾಪರ್ಸ್ ನ್ನು ಖರೀದಿಸಿದರೆ ಸೂಕ್ತವಾಗಿರಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. 
ಭಾರತ ಕಮೋವ್ 226 ಟಿ ಹೆಲಿಕಾಪ್ಟರ್‌ ನ್ನು ಖರೀದಿಸಿದರೆ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನಾವು ಹೆಲಿಕಾಫ್ಟರ್ ಗಳನ್ನು ಸ್ಥಳೀಯವಾಗಿ ಉತ್ಪಾದನೆ ಹಾಗೂ ಜೋಡಣೆ ಕೆಲಸವನ್ನು ಮಾಡುತೇವೆ ಎಂದು ರಷ್ಯಾ ಹೆಲಿಕಾಫ್ಟರ್ಸ್ ನ ಸಿಇಒ ಆಂಡ್ರೇ ಬೊಗಿನಿಸ್ಕಿ ತಿಳಿಸಿದ್ದಾರೆ. 
200 ಕಮೋವ್ ಟಿ ಹೆಲಿಕಾಫ್ಟರ್ ಗಳ ಉತ್ಪಾದನೆಗಾಗಿ ಭಾರತ-ರಷ್ಯಾ 2015 ರ ಪ್ರಾರಂಭದಲ್ಲಿ 60 ಹೆಲಿಕಾಫ್ಟರ್ ಗಳನ್ನು ಭಾರತಕ್ಕೆ ಕಳಿಸಿಕೊಡಲಾಗುವುದು, ಉಳಿದ 140 ನ್ನು ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತದೆ ಎಂದು ರಷ್ಯಾದ ಹೆಲಿಕಾಫ್ಟರ್ ಸಂಸ್ಥೆ ತಿಳಿಸಿದೆ 
ಕಳೆದ ವರ್ಷ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಮೋವ್ ಹೆಲಿಕಾಫ್ಟರ್ ಗಳನ್ನು ಖರೀದಿಸಲು ರಷ್ಯಾ ರಕ್ಷಣಾ ಸಂಸ್ಥೆಗಳು ಹಾಗೂ ಹೆಚ್ಎಎಲ್ ನಡುವೆ ಒಪ್ಪಂದ ನಡೆದಿತ್ತು. ಈಗ ರಷ್ಯಾ ತನ್ನ ಕಮೋವ್ 226 ಟಿ ಜೆವಿ ಶ್ರೇಣಿಯ ಹೆಲಿಕಾಫ್ಟರ್ ಗಳನ್ನೂ ಪರಿಗಣಿಸುವಂತೆ ಭಾರತಕ್ಕೆ ಸಲಹೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com