ದೇಶೀ ತಂತ್ರಜ್ಞಾನ ನಿರ್ಮಿತ ಆಕಾಶ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ದೇಶೀಯ ನಿರ್ಮಿತ ಭೂಮಿಯಿಂದ ಕಾಶಕ್ಕೆ ಚಿಮ್ಮುವ ಸೂಪರ್​ ಸಾನಿಕ್​ ಆಕಾಶ್​ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ.
ದೇಶೀ ತಂತ್ರಜ್ಞಾನ ನಿರ್ಮಿತ  ಆಕಾಶ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ದೇಶೀ ತಂತ್ರಜ್ಞಾನ ನಿರ್ಮಿತ ಆಕಾಶ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಬಾಲಸೂರ್: ದೇಶೀಯ ನಿರ್ಮಿತ ಭೂಮಿಯಿಂದ ಕಾಶಕ್ಕೆ ಚಿಮ್ಮುವ ಸೂಪರ್​ ಸಾನಿಕ್​ ಆಕಾಶ್​ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾದ ಚಾಂದಿಪುರ್​ನಲ್ಲಿರುವ ಪರೀಕ್ಷಾ ವಲಯದಿಂದ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು ಪರೀಕ್ಷೆ ಯಶಸ್ವಿಯಾಗಿರುವುದಾಗಿ ಮೂಲಗಳು ತಿಳಿಸಿದೆ.
ಆಕಾಶ್​ ಕ್ಷಿಪಣಿಯಲ್ಲಿ ತರಂಗಾಂತರಗಳನ್ನು ಸ್ವೀಕರಿಸುವ ತಂತ್ರಜ್ಞಾನವನ್ನು ದೇಶೀಯವಾಗಿ ರೂಪಿಸಲಾಗಿದ್ದು ಕ್ಷಿಪಣಿ 55 ಕೆ.ಜಿ. ಸಿಡಿತಲೆ ಹೊತ್ತು 25 ಕಿ.ಮೀ. ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಎಲ್ಲಾ ವಿಧದ ಹವಾಗುಣದಲ್ಲಿ ಕಾರ್ಯ ನಿರ್ವಹಿಸುವ ಈ ಕ್ಷಿಪಣಿ ವ್ಯವಸ್ಥೆ ಸಂಪೂರ್ಣ ಸ್ವಯಂಚಾಲಿತವಾಗಿದೆ. ಯಾವ ದಿಕ್ಕಿನಿಂದ ದಾಳಿಯಾದರೂ ತಡೆಯಬಲ್ಲ ಸಾಮರ್ಥ್ಯ ಇದಕ್ಕಿದೆ. ವೈರಿ ಪಡೆಯ ವಿಮಾನ, ಎಲ್ಲಾ ವಿಧದ ಕ್ಷಿಪಣಿಗಳನ್ನು ಇದು ಹೊಡೆದುರುಳಿಸುತ್ತದೆ.
ಆಕಾಶ್ ನ್ನು ಶೀಘ್ರವಾಗಿ ಸೇನೆಗೆ ಸೇರ್ಪಡೆ ಮಾಡಲಾಗುತ್ತದೆ. ಈ ಕ್ಷಿಪಣಿಯ ಯಶಸ್ವಿ ಪರೀಕ್ಷೆಯಿಂದಾಗಿ ಭಾರತ ಭೂಮಿಂದ ಆಕಾಶಕ್ಕೆ ಚಿಮ್ಮಬಲ್ಲ ಕ್ಷಿಪಣಿ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com