"ನನ್ನ ಹೇಳಿಕೆ ಯಾವುದೇ ವಿವಾದ ಸೃಷ್ಟಿಸುವ ಸಂಬಂಧ ನೀಡಿದ್ದಾಗಿರಲಿಲ್ಲ. ಆದರೂ ನನ್ನ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದರೆ ನಾನು ಪಕ್ಷ ನೀಡುವ ಯಾವುದೇ ರೀತಿಯ ಶಿಕ್ಷೆಯನ್ನು ಸ್ವೀಕರಿಸುತ್ತೇನೆ, ಕಾಂಗ್ರೆಸ್ ಪಕ್ಷ ನನಗೆ ಅಗತ್ಯಕ್ಕಿಂತ ಮೀರಿದ್ದನ್ನು ಕೊಟ್ಟಿದೆ. ನನ್ನಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗುವುದು ನನಗಿಷ್ಟವಿಲ್ಲ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.