ಜ.1 ರಿಂದ ಮೊಬೈಲ್ ನಂಬರ್ ನ್ನು ಒಪಿಟಿ ಮೂಲಕ ಆಧಾರ್ ಗೆ ಲಿಂಕಿಂಗ್ ಸಾಧ್ಯ

ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡದೇ ಇರುವವರು ಜ.1 ರಿಂದ ವಾಯ್ಸ್-ಗೈಡೆಡ್ ವ್ಯವಸ್ಥೆ ಮೂಲಕ ಮನೆಯಿಂದಲೇ ಮೊಬೈಲ್ ನಂಬರ್ ನ್ನು ಆಧಾರ್ ಗೆ ಲಿಂಕ್ ಮಾಡಬಹುದಾಗಿದೆ.
ಆಧಾರ್
ಆಧಾರ್
ನವದೆಹಲಿ: ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡದೇ ಇರುವವರು ಜ.1 ರಿಂದ ವಾಯ್ಸ್-ಗೈಡೆಡ್ ವ್ಯವಸ್ಥೆ ಮೂಲಕ ಮನೆಯಿಂದಲೇ ಮೊಬೈಲ್ ನಂಬರ್ ನ್ನು ಆಧಾರ್ ಗೆ ಲಿಂಕ್ ಮಾಡಬಹುದಾಗಿದೆ. 
ಒಪಿಟಿ ಮೂಲಕ ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದ್ದು, ಟೆಲಿಕಾಂ ಸಂಸ್ಥೆಗಳು ಹಾಗೂ ಯುಐಡಿಎಐ ನಡುವೆ ಗೊಂದಲಗಳಿದ್ದ ಹಿನ್ನೆಲೆಯಲ್ಲಿ ಉದ್ದೇಶಿತ ದಿನಾಂಕಕ್ಕಿಂತಲೂ ಒಂದು ತಿಂಗಳು ತಡವಾಗಿ ಈ ಸೌಲಭ್ಯ ಜಾರಿಗೆ ಬರುತ್ತಿದೆ. 
50 ಕೋಟಿಗೂ ಹೆಚ್ಚು ಗ್ರಾಹಕರು ತಮ್ಮ ಮೊಬೈಲ್ ನ್ನು ಆಧಾರ್ ಗೆ ಲಿಂಕ್ ಮಾಡಬೇಕಿದ್ದು, ಗ್ರಾಹಕ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಗೆ ಲಿಂಕ್ ಮಾಡಿಸುವ ಪ್ರಕ್ರಿಯೆ ಕಷ್ಟ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಫೆ.1 ರ ವರೆಗೆ ಮೊಬೈಲ್ ನಂಬರ್ ನ್ನು ಆಧಾರ್ ಕಾರ್ಡ್ ಗೆ ಜೋಡಣೆ ಮಾಡಲು ಅವಕಾಶ ನೀಡಲಾಗಿದ್ದು, ಜ.1 ರಿಂದ ವಾಯ್ಸ್-ಗೈಡೆಡ್ ವ್ಯವಸ್ಥೆ ಮೂಲಕ ಮನೆಯಿಂದಲೇ ಮೊಬೈಲ್ ನಂಬರ್ ನ್ನು ಆಧಾರ್ ಗೆ ಲಿಂಕ್ ಮಾಡಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com