ಗುಜರಾತ್ ವಿಧಾನಸಭೆ ಚುನಾವಣೆ: ಮೊದಲ ಹಂತದ ಮತದಾನ ಆರಂಭ

ಭಾರಿ ಕುತೂಹಲ ಕೆರಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್​ ನಲ್ಲಿ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ.
ಮತದಾನಕ್ಕಾಗಿ ಕಾದು ನಿಂತಿರುವ ಗುಜರಾತ್ ಜನತೆ
ಮತದಾನಕ್ಕಾಗಿ ಕಾದು ನಿಂತಿರುವ ಗುಜರಾತ್ ಜನತೆ
Updated on
ಅಹ್ಮದಾಬಾದ್​: ಭಾರಿ ಕುತೂಹಲ ಕೆರಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್​ ನಲ್ಲಿ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ.
ಮೊದಲ ಹಂಕದಲ್ಲಿ ಒಟ್ಟು 89 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 19 ಜಿಲ್ಲೆಗಳಲ್ಲಿ ಚುನಾವಣೆ ಬಿರುಸಿನಿಂದ ಸಾಗಿದೆ. ಕಚ್, ಮೊರ್ಬಿ, ಜಾಮ್ ನಗರ್, ಸುರೇಂದ್ರನಗರ್, ದೇವ್ಭೂಮಿ ದ್ವಾರಕಾ, ರಾಜ್ ಕೋಟ್, ಬೊಟಾದ್, ಪೋರ್  ಬಂದರ್, ಜುನಘಡ್, ಅಮ್ರೇಲಿ, ಗಿರ್ ಸೋಮನಾಥ್, ಭಾವನಗರ, ಭರೂಚ್, ನರ್ಮದಾ, ಸೂರತ್, ಟ್ಯಾಪಿ, ನವಸಾರಿ, ಡ್ಯಾಂಗ್ ಮತ್ತು ವಲ್ಸಾದ್ ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ಮತದಾನ ಬಿರುಸಿನಿಂದ ಸಾಗಿದೆ.  ಒಟ್ಟು 2.12  ಕೋಟಿ ಮತದಾರರು 977 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಮತದಾನಕ್ಕಾಗಿ ಒಟ್ಟು 24,689 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 19 ಜಿಲ್ಲೆಗಳ ಒಟ್ಟು 2,12,31,652 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1,11,05,933 ಪುರುಷ ಮತದಾರರಿದ್ದು, 1,01,25,472 ಮಹಿಳಾ  ಮತದಾರರಿದ್ದಾರೆ. ಇನ್ನು 247 ಮಂದಿ ತೃತೀಯ ಲಿಂಗಿಗಳೂ ಕೂಡ ಇಂದು ಮತದಾನ ಮಾಡುತ್ತಿರುವುದು ವಿಶೇಷವಾಗಿದೆ. ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಎರಡನೇ ಹಂತದ ಮತದಾನ ಡಿಸೆಂಬರ್14  ರಂದು ನಡೆಯಲಿದೆ. 
ಬಿಜೆಪಿಯದ್ದೇ ಪಾರಮ್ಯ
ಪ್ರಸ್ತುತ 89 ಕ್ಷೇತ್ರಗಳ ಪೈಕಿ ಆಡಳಿತಾರೂಢ ಬಿಜೆಪಿ ಪಕ್ಷವೇ ಅತೀ ಹೆಚ್ಚು ಶಾಸಕರು ಅಂದರೆ 67 ಕ್ಷೇತ್ರಗಳನ್ನು ಹೊಂದಿದ್ದು, ಕಾಂಗ್ರೆಸ್ 16 ಮತ್ತು ಎನ್ ಸಿಪಿ ಮತ್ತು ಜೆಡಿಯು ತಲಾ ಒಂದೊಂದು ಸ್ಥಾನಗಳಿಸಿವೆ.  ಉಳಿದೆರಡು  ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com