ಗುಜರಾತ್ ಮತದಾನ: ಕೆಲವು ಭಾಗಗಳಲ್ಲಿ ಇವಿಎಂ ದೋಷ, ಉಳಿದ ಭಾಗಗಳಲ್ಲಿ ಚುರುಕಿನ ಮತದಾನ

ಗುಜರಾತ್ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ವರೆಗೆ ಶೇ.32 ಕ್ಕೂ ಹೆಚ್ಚು ಮತದಾನ ನಡೆದಿದೆ.
ವಿಜಯ್ ರೂಪಾನಿ
ವಿಜಯ್ ರೂಪಾನಿ
Updated on: 
ಗಾಂಧಿನಗರ: ಗುಜರಾತ್ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು,  ಮಧ್ಯಾಹ್ನದ ವರೆಗೆ ಶೇ.32 ಕ್ಕೂ ಹೆಚ್ಚು ಮತದಾನ ನಡೆದಿದೆ. 
ಕೆಲವು ಭಾಗಗಳಲ್ಲಿ ಇವಿಎಂ ಗಳಲ್ಲಿ ದೋಷ ಕಂಡುಬಂದಿದ್ದು, ಆದರೆ ಬಹುತೇಕ ಪ್ರದೇಶಗಳಲ್ಲಿ ಮತದಾನ ಚುರುಕಿನಿಂದ ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. 89 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಇವಿಎಂ ಗಳಲ್ಲಿ ದೋಷ ಕಂಡುಬರುತ್ತಿರುವ ವರದಿಗಳು ಹೆಚ್ಚಾಗುತ್ತಿವೆ. ಅಮ್ರೇಲಿಯಲ್ಲಿ ಶೇ.32 ರಷ್ಟು ಮತದಾನ, ಮೋಬ್ರಿಯಲ್ಲಿ ಶೇ.33 ರಷ್ಟು, ರಾಜ್ ಕೋಟ್ ನಲ್ಲಿ ಶೇ.35 ರಷ್ಟು, ಜಮ್ನಗರ್-ಶೇ.32  ಕಛ್ ನಲ್ಲಿ ಶೇ.29, ಪೋರ್ಬಂದರ್ ನಲ್ಲಿ ಶೇ.28, ಗಿರ್ ಸೋಮ್ನಾಥ್-ಶೇ.30 ರಷ್ಟು ಮತದಾನವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com