ಇನ್ನೂ 2 ವರ್ಷ ನೋಟು ನಿಷೇಧ, ಜಿಎಸ್‌ ಟಿ ಆಘಾತ ಮುಂದುವರೆಯಲಿದೆ: ಆರ್ ಬಿಐ ಮಾಜಿ ಗವರ್ನರ್

ದೇಶದ ಆರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿರುವ ನೋಟು ನಿಷೇಧ, ಜಿಎಸ್‌ ಟಿ ಆಘಾತ ಇನ್ನೂ ವರ್ಷಗಳ ಕಾಲ ಮುಂದುವರೆಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ವೈ.ವಿ.ರೆಡ್ಡಿ ಹೇಳಿದ್ದಾರೆ.
ಮಾಜಿ ಗವರ್ನರ್ ವೈ.ವಿ.ರೆಡ್ಡಿ (ಸಂಗ್ರಹ ಚಿತ್ರ)
ಮಾಜಿ ಗವರ್ನರ್ ವೈ.ವಿ.ರೆಡ್ಡಿ (ಸಂಗ್ರಹ ಚಿತ್ರ)
Updated on
ನವದೆಹಲಿ: ದೇಶದ ಆರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿರುವ ನೋಟು ನಿಷೇಧ, ಜಿಎಸ್‌ ಟಿ ಆಘಾತ ಇನ್ನೂ ವರ್ಷಗಳ ಕಾಲ ಮುಂದುವರೆಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ವೈ.ವಿ.ರೆಡ್ಡಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ, ನೋಟು ನಿಷೇಧ ಮತ್ತು ಹೆಚ್ಚುತ್ತಿರುವ ಕೆಟ್ಟ ಸಾಲಗಳ ಮೊತ್ತದಂತಹ ಆಘಾತಗಳ ಹಿನ್ನೆಲೆಯಲ್ಲಿ ಪ್ರಸ್ತುತ ಭಾರತದ ಜಿಡಿಪಿ ಬೆಳವಣಿಗೆ ಕಷ್ಟಸಾಧ್ಯ.  ಆರ್ಥಿಕತೆಯು ಬಲಗೊಳ್ಳಲು ಮತ್ತು ಹೆಚ್ಚು ಬೆಳವಣಿಗೆ ಮಟ್ಟಕ್ಕೆ ಮರಳಲು ಇನ್ನೂ ಎರಡು ವರ್ಷಗಳ ಕಾಲಾವಕಾಶ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇಶದ ಆರ್ಥಿಕತೆ ಬೆಳವಣಿಗೆಯು ಶೇ.7.5-8ರ ದರಕ್ಕೆ ಯಾವಾಗ  ಮರಳುತ್ತದೆ ಎಂದು ಹೇಳುವುದು ಸದ್ಯಕ್ಕೆ ಕಠಿಣವಾಗಿದೆ. ಮುಂದಿನ 24 ತಿಂಗಳುಗಳಲ್ಲಿ ಆರ್ಥಿಕತೆಯು ತನ್ನ ಹಿಂದಿನ ಮಟ್ಟಕ್ಕೆ ಮರಳುವ ಸಾಧ್ಯತೆಗಳು ಕಂಡು ಬರುತ್ತಿಲ್ಲ ಎಂದು ಅವರು ಹೇಳಿದರು.
ಅಂತೆಯೇ ಇತ್ತೀಚೆಗಿನ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ವೈವಿ ರೆಡ್ಡಿ ಅವರು, ಕೇಂದ್ರ ಸರ್ಕಾರದ ಕ್ರಮಗಳಲ್ಲಿ ನಕಾರಾತ್ಮಕ ಅಂಶಗಳೇ ಮುಂಚೂಣಿಯಲ್ಲಿರುವುದು  ಆಘಾತವನ್ನುಂಟು ಮಾಡಿದೆ. ಕೆಲ ಪರಿಷ್ಕರಣೆಗಳಾಗಬಹುದು ಮತ್ತು ಕೆಲವು ಪ್ರಮಾಣದಲ್ಲಿ ಲಾಭಗಳೂ ಇರಬಹುದು. ಆದರೆ ಲಾಭಗಳು ನಂತರ ದೊರೆಯಲಿವೆ, ಹೀಗಾಗಿ ಪ್ರಸ್ತುತ ಅದರ ವ್ಯತಿರಿಕ್ತ ಪರಿಣಾಮ ಇದ್ದೇ ಇರುತ್ತದೆ  ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಕಚ್ಚಾ ತೈಲಬೆಲೆಗಳಲ್ಲಿ ಭಾರೀ ಕುಸಿತವು ಸುಮಾರು ಮೂರು ವರ್ಷಗಳ ಕಾಲ ಆರ್ಥಿಕತೆಯು ಬಲಗೊಳ್ಳಲು ನೆರವಾಗಿತ್ತು. ಆದರೆ ಇತ್ತೀಚಿನ ನಕಾರಾತ್ಮಕ ಅಂಶಗಳು ಆರ್ಥಿಕತೆಯ ಬೆಳವಣಿಗೆ ದರಕ್ಕೆ ಪೆಟ್ಟು ನೀಡಿವೆ.  ಹಿಂದಿನ ಸರ್ಕಾರದ ಆಡಳಿತದಲ್ಲಿ ಬೇಕಾಬಿಟ್ಟಿ ಸಾಲ ನೀಡಿಕೆ ಮತ್ತು ಭ್ರಷ್ಟಾಚಾರದ ಆರೋಪಗಳಿಂದಾಗಿ ದೂರಸಂಪರ್ಕ, ವಿದ್ಯುತ್ ಹಾಗೂ ಕಲ್ಲಿದ್ದಲು ಕ್ಷೇತ್ರಗಳಲ್ಲಿಯ ಕೆಲವು ಬೆಳವಣಿಗೆಗಳು ಕಾರ್ಪೊರೇಟ್ ಜಗತ್ತಿನ ಮೇಲೆ ಭಾರೀ  ಒತ್ತಡವನ್ನುಂಟು ಮಾಡಿದ್ದವು. ಪರಿಣಾಮವಾಗಿ ವ್ಯವಸ್ಥೆಯಲ್ಲಿನ ಕೆಟ್ಟ ಸಾಲಗಳ ಮೊತ್ತ ಶೇ.15ರಷ್ಟು ಏರಿಕೆಯಾಗಿ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸುಮಾರು 10 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com