ಗುಜರಾತ್: ಪ್ರಧಾನಿ ಮೋದಿ, ರಾಹುಲ್ ಗಾಂಧಿ ರೋಡ್ ಶೋಗೆ ಬ್ರೇಕ್

ಗುಜರಾತ್ ವಿಧಾನಸಭೆ ಚುನಾವಣೆ ಎರಡನೇ ಹಂತದ ಮತದಾನ 14ರಂದು ನಡೆಯಲಿದ್ದು ಈ ಸಂಬಂಧ ಗುಜರಾತ್ ನ ರಾಜಧಾನಿಯಲ್ಲಿ ನಾಳೆ...
ನರೇಂದ್ರ ಮೋದಿ-ರಾಹುಲ್ ಗಾಂಧಿ
ನರೇಂದ್ರ ಮೋದಿ-ರಾಹುಲ್ ಗಾಂಧಿ
ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆ ಎರಡನೇ ಹಂತದ ಮತದಾನ 14ರಂದು ನಡೆಯಲಿದ್ದು ಈ ಸಂಬಂಧ ಗುಜರಾತ್ ನ ರಾಜಧಾನಿಯಲ್ಲಿ ನಾಳೆ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರೋಡ್ ಶೋಗೆ ಅನುಮತಿ ನಿರಾಕರಿಸಲಾಗಿದೆ. 
ರೋಡ್ ಶೋದಿಂದಾಗಿ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕುಂಟಾಗಬಹುದೆಂಬ ಭೀತಿಯಲ್ಲಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಇವರಿಬ್ಬರ ರೋಡ್ ಶೋಗೆ ಅಹಮದಾಬಾದ್ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. 
ಪ್ರಧಾನಿ ಮೋದಿ, ರಾಹುಲ್ ಗಾಂಧಿ ರೋಡ್ ಶೋಗೆ ಸಕಾರಣವಾಗಿ ಅನುಮತಿ ನಿರಾಕರಿಸಿರುವುದನ್ನು ಅಹಮದಾಬಾದ್ ಪೊಲೀಸ್ ಆಯುಕ್ತ ಅನೂಪ್ ಕುಮಾರ್ ಸಿಂಗ್ ದೃಢಪಡಿಸಿದ್ದಾರೆ. 
ಬಿಜೆಪಿ ಧರಣೀಧರದಿಂದ ದೇರಾಸರ್ ವರೆಗೆ. ಕಾಂಗ್ರೆಸ್ ಜಗನ್ನಾಥ ಮಂದಿರದಿಂದ ಮೇಮ್ ಕೋ ಚಾರ್ ರಸ್ತೆವರೆಗೆ  ರೋಡ್ ಶೋ ನಡೆಸಲು ಅನುಮತಿ ಕೋರಿದ್ದವು. ಈ ಎರಡು ಕೋರಿಕೆಗಳನ್ನು ಕಾನೂನು ಮತ್ತು ಸುವ್ಯವಸ್ಥೆಯ ಕಾರಣಕ್ಕೆ ನಿರಾಕರಿಸಲಾಗಿದೆ ಎಂದು ಅನೂಪ್ ಕುಮಾರ್ ಸಿಂಗ್ ಹೇಳಿದ್ದಾರೆ. 
ಡಿಸೆಂಬರ್ 14ರಂದು ನಡೆಯುವ ಗುಜರಾತ್ ಎರಡನೇ ಹಂತದ ಚುನಾವಣೆಯಲ್ಲಿ 93 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com